ಮುಂಬೈ(ಮಹಾರಾಷ್ಟ್ರ) :ಹೆಲಿಕಾಪ್ಟರ್ ಒಂದು ಮುಂಬೈನಲ್ಲಿರುವ ONGC ರಿಗ್ ಸಾಗರ್ ಕಿರಣ್ ಬಳಿ ಅರಬ್ಬೀ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ನಲ್ಲಿ 7 ಮಂದಿ ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳಿದ್ದು, ಈವರೆಗೆ ಆರು ಮಂದಿಯನ್ನು ರಕ್ಷಿಸಲಾಗಿದೆ. ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ಟ್ವೀಟ್ ಮಾಡಿದೆ.
ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ : 6 ಜನರ ರಕ್ಷಣೆ - ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ
9 ಜನರನ್ನು ಹೊತ್ತ ಓಎನ್ಜಿಸಿ ಹೆಲಿಕಾಪ್ಟರ್ ಮುಂಬೈ ಹೈನಲ್ಲಿರುವ ONGC ರಿಗ್ ಸಾಗರ್ ಕಿರಣ್ ಬಳಿ ಅರಬ್ಬೀ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇದುವರೆಗೆ 6 ಮಂದಿಯನ್ನು ರಕ್ಷಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
![ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ : 6 ಜನರ ರಕ್ಷಣೆ A helicopter carrying 7 passengers and 2 pilots makes an emergency landing in Arabian Sea](https://etvbharatimages.akamaized.net/etvbharat/prod-images/768-512-15678613-thumbnail-3x2-sea.jpg)
ಅರಬ್ಬೀ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಓಎನ್ಜಿಸಿ ಹೆಲಿಕಾಪ್ಟರ್
ಕೋಸ್ಟ್ ಗಾರ್ಡ್ ಏರ್‌ಕ್ರಾಫ್ಟ್ ಲೈಫ್ ರಾಫ್ಟ್‌ಗಳನ್ನು ನೀಡಿ, ಹೆಲಿಕಾಪ್ಟರ್ನಲ್ಲಿದ್ದವರನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆ ಮತ್ತು ONGC ಯೊಂದಿಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ಕಾರಣಗಳು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ :ತುರ್ತು ಭೂ ಸ್ಪರ್ಶ ವೇಳೆ ಟ್ರಕ್ಗೆ ಡಿಕ್ಕಿ ಹೊಡೆದ ಜೆಟ್ ವಿಮಾನ.. ಪೈಲಟ್ ಸೇರಿ ಆರು ಜನ ದುರ್ಮರಣ