ಕರ್ನಾಟಕ

karnataka

ETV Bharat / bharat

ದೀಪಾವಳಿಯ ಭವ್ಯ ದೀಪೋತ್ಸವ: 40 ಕ್ವಿಂಟಲ್​ ಶುದ್ಧ ತುಪ್ಪ ಬಳಸಿ 6 ಲಕ್ಷ ದೀಪ ಬೆಳಗಿಸಿ ದಾಖಲೆ - ಬಿಹಾರ ರಾಜ್ಯದಲ್ಲೇ ಬೃಹತ್ ಪ್ರಮಾಣದ ದೀಪಾವಳಿ

ಬಿಹಾರ ರಾಜ್ಯದಲ್ಲೇ ಬೃಹತ್ ಪ್ರಮಾಣದ ದೀಪಾವಳಿಯನ್ನು ಮುಂಗೇರ್​ ಜಿಲ್ಲೆಯ ಬರಿಯಾರ್‌ಪುರ ಬ್ಲಾಕ್‌ನ ಕಲ್ಯಾಣಪುರ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ 6 ಲಕ್ಷ ಮಣ್ಣಿನ ದೀಪಗಳನ್ನುಬೆಳಗಿಸಲಾಯಿತು. ಅದರಲ್ಲಿ 6 ಸಾವಿರ ಕೆಜಿ ಎಳ್ಳೆಣ್ಣೆ ಮತ್ತು 40 ಕ್ವಿಂಟಲ್ ಶುದ್ಧ ತುಪ್ಪ ಬಳಸಲಾಗಿದೆ. ಈ ಭವ್ಯ ದೀಪೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಖ್ಯಾತ ಹೋಮಿಯೋಪತಿ ವೈದ್ಯ ಡಾ.ನಿತೀಶ್ ದುಬೆ ಇದರ ಸಂಸ್ಥಾಪಕರು.

ಕಲ್ಯಾಣಪುರದಲ್ಲಿ ಭರ್ಜರಿ ದೀಪಾವಳಿ ದೀಪೋತ್ಸವ
grand Diwali Diwali in Kalyanpur

By

Published : Oct 24, 2022, 12:15 PM IST

ಮುಂಗೇರ್: ಬಿಹಾರ ರಾಜ್ಯದಲ್ಲೇ ಬೃಹತ್ ಪ್ರಮಾಣದ ದೀಪಾವಳಿಯನ್ನು ಮುಂಗೇರ್​ ಜಿಲ್ಲೆಯ ಬರಿಯಾರ್‌ಪುರ ಬ್ಲಾಕ್‌ನ ಕಲ್ಯಾಣಪುರ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ 6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಯಿತು. ಅದರಲ್ಲಿ 6 ಸಾವಿರ ಕೆಜಿ ಎಳ್ಳೆಣ್ಣೆ ಮತ್ತು 40 ಕ್ವಿಂಟಲ್ ಶುದ್ಧ ತುಪ್ಪ ಬಳಸಲಾಗಿದೆ. ಈ ಭವ್ಯ ದೀಪೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಮುಂಗೇರ್ ಜಿಲ್ಲೆಯ ಕಲ್ಯಾಣಪುರ ಗ್ರಾಮದಲ್ಲಿ ಧಂತೇರಸ್ ದಿನ ಏಕಕಾಲದಲ್ಲಿ 6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಯಿತು. ಕಲ್ಯಾಣಪುರ ದೇವಸ್ಥಾನದಲ್ಲಿ 359 ವರ್ಷಗಳ ಹಿಂದೆ ಸ್ಥಾಪಿತವಾದ ಬದಿ ದುರ್ಗ ಮಹಾರಾಣಿ, ಈ ಮಾತೆಯ ಕೃಪೆ ಈ ಗ್ರಾಮದ ಜನರ ಮೇಲಿದ್ದು, ಇಲ್ಲಿನ ಗ್ರಾಮಸ್ಥರು ಕೂಡ ಅಮ್ಮನ ಸೇವೆಯಲ್ಲಿ ನಾನಾ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ.

ಆರತಿಯೊಂದಿಗೆ ದೀಪೋತ್ಸವ: ಮಾತೆ ದುರ್ಗೆಯ ಅಲಂಕಾರದ ನಂತರ ಆರತಿಯೊಂದಿಗೆ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗಂಗಾ ಮಾತೆಯ ಮಹಾ ಆರತಿಯನ್ನು ಮಂತ್ರಘೋಷದೊಂದಿಗೆ ನೆರವೇರಿಸಲಾಯಿತು. ಈ ಅದ್ಭುತ ದೀಪೋತ್ಸವಕ್ಕೆ ದೂರದೂರುಗಳಿಂದ ಜನರು ದುರ್ಗೆಗೆ ಆಗಮಿಸಿದ್ದರು.

ಯೂತ್ ಕ್ಲಬ್, ಕಲ್ಯಾಣಪುರ, ಗ್ರಾಮಸ್ಥರು ಲಕ್ಷಗಟ್ಟಲೆ ದೀಪಗಳನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಗ ದೇವಾಲಯದ ಆವರಣದಲ್ಲಿ ದೀಪದೊಂದಿಗೆ, ಅಯೋಧ್ಯಾ ದೇವಾಲಯದ ಅಬೀರ್, ಗುಲಾಲ್‌ನ ಆಕೃತಿಗಳು ಸೇರ್ಪಡೆಯಾಗುತ್ತಿದ್ದವು. ಇಡೀ ಕಾರ್ಯಕ್ರಮವನ್ನು ಅಂತರ್ಜಾಲದ ಮೂಲಕವೂ ನೇರ ಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಗಲ್ಪುರ ಡಿಐಜಿ ವಿವೇಕಾನಂದ, ತಾರಾಪುರ ಡಿಎಸ್ಪಿ ಪಂಕಜ್ ಕುಮಾರ್ ಉಪಸ್ಥಿತರಿದ್ದರು.

6 ಲಕ್ಷ ದೀಪ ಬೆಳಗಿಸಿ ಹೊಸ ದಾಖಲೆ: ಈ ದೀಪೋತ್ಸವವನ್ನು ಈ ವರ್ಷವೂ ಕಲ್ಯಾಣಪುರ ಗ್ರಾಮದ ಪ್ರಧಾನ ಕಚೇರಿಯಿಂದ 24 ಕಿ.ಮೀ ದೂರದಲ್ಲಿ ಗಂಗಾನದಿ ದಡದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು 10 ಸಾವಿರ ಜನರು ಭಾಗವಹಿಸಿದ್ದರು. ಬೇಡಿ ಮಾತೆ ದುರ್ಗಾ ಮಹಾರಾಣಿಯವರ ಆಶೀರ್ವಾದ ಹಾಗೂ ಗ್ರಾಮಸ್ಥರ ನಂಬಿಕೆಯಿಂದಾಗಿ ದೀಪೋತ್ಸವ ಯಶಸ್ವಿಗೊಳಿಸಲು ಸಾಧ್ಯವಾಗಿದೆ ಎಂದು ಈ ದೀಪೋತ್ಸವದ ಸಂಸ್ಥಾಪಕ ಡಾ.ನಿತೀಶ್ ದುಬೆ ತಿಳಿಸಿದ್ದಾರೆ.

ಸ್ಥಳೀಯ ಕುಂಬಾರರಿಂದ ದೀಪ ರೆಡಿ: 6 ಲಕ್ಷ ದೀಪಗಳನ್ನು ಜಿಲ್ಲೆಯ ವಿವಿಧ ಬ್ಲಾಕ್ ಪ್ರದೇಶಗಳ ಕುಂಬಾರರು ತಯಾರಿಸಿ, ಕೊಟ್ಟಿದ್ದರು. ಕೆಲವರು ತಮ್ಮ ಮನೆಗಳಿಂದಲೂ ದೀಪವನ್ನೂ ತಂದಿದ್ದರು. ಬಳಿಕ ದೇವಸ್ಥಾನದ ಆವರಣದಲ್ಲಿ ಭವ್ಯ ಭಂಡಾರ ಏರ್ಪಡಿಸಲಾಗಿತ್ತು. ಈ ದೀಪೋತ್ಸವದ ಯಶಸ್ಸಿನಲ್ಲಿ ಕಲ್ಯಾಣಪುರ ಯೂತ್ ಕ್ಲಬ್‌ನ ಗುಲಾಬ್ ಸಿಂಗ್, ಮನೀಶ್ ಸಿನ್ಹಾ, ಚಂದನ್ ದುಬೆ, ವಿವೇಕ್ ದುಬೆ, ಸುದಮ್ ಚೌಧರಿ, ಪವನ್ ದುಬೆ, ಅಮಿತ್ ದುಬೆ, ಪ್ರಿಯರಂಜನ್ ದುಬೆ, ಪ್ರಹ್ಲಾದ್ ದುಬೆ ಸೇರಿದಂತೆ ಗ್ರಾಮದ ನೂರಾರು ಯುವಕರು ಪಾಲ್ಗೊಂಡಿದ್ದರು ಎಂದರು.

ಇದನ್ನೂ ಓದಿಪಣಜಿಯಲ್ಲಿ ನರಕಾಸುರನ ಪ್ರತಿಕೃತಿ ದಹನ: ಉಜ್ಜಯಿನಿ ಮಹಾಕಾಲನಿಗೆ ವಿಶೇಷ ಆರತಿ

ABOUT THE AUTHOR

...view details