ಕರ್ನಾಟಕ

karnataka

ETV Bharat / bharat

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಅನಾಹುತ; ಇಂಡಿಗೋ ಚಕ್ರದಡಿ ಸಿಲುಕಿದ ಕಾರು! - ಈಟಿವಿ ಭಾರತ ಕನ್ನಡ

ಇಂಡಿಗೋ ವಿಮಾನದ ಚಕ್ರದಡಿ ಕಾರ್ ಸಿಲುಕಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಕೆಲಕಾಲ ಆತಂಕ ಉಂಟಾಗಿತ್ತು.

Go First car goes under Indi Go plane
Go First car goes under Indi Go plane

By

Published : Aug 2, 2022, 3:52 PM IST

Updated : Aug 2, 2022, 4:11 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಇಂಡಿಗೋ ವಿಮಾನದ ಚಕ್ರದಡಿ ಗೋ ಫಸ್ಟ್ ಕಾರ್ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಇಂದು ಬೆಳಗ್ಗೆ ಘಟನೆ ನಡೆದಿದೆ. ಇಂಡಿಗೋ A320neo ವಿಮಾನ ನಿಂತಿದ್ದಾಗ ಗೋ ಫಸ್ಟ್ ಕಾರು ಅಲ್ಲಿಗೆ ತೆರಳಿದ್ದು, ಸ್ವಲ್ಪದರಲ್ಲೇ ವಿಮಾನದ ಮುಂದಿನ ಚಕ್ರಕ್ಕೆ ಡಿಕ್ಕಿಯಾಗುವುದು ತಪ್ಪಿದೆ. ವಿಮಾನ ನಿಲ್ದಾಣದ ಟರ್ಮಿನಲ್​ ಸ್ಟ್ಯಾಂಡ್​ ಸಂಖ್ಯೆ 201ರಲ್ಲಿ ಘಟನೆ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆಗೆ ಆದೇಶ ನೀಡಿದೆ.


ಇದನ್ನೂ ಓದಿರಿ:ಶೂ ಒಳಗೆ ಬೆಚ್ಚಗೆ ಕುಳಿತ ನಾಗರ ಹಾವು; ಮಳೆಗಾಲದಲ್ಲಿ ಹುಷಾರಾಗಿರಿ! ವಿಡಿಯೋ

ಕಾರು ಚಾಲಕನಿಗೆ ಮದ್ಯ ಸೇವನೆಯ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ. ದೆಹಲಿಯಿಂದ ಪಾಟ್ನಾಗೆ ಹೊರಡಲು ಸಿದ್ಧವಾಗುತ್ತಿದ್ದ ವಿಮಾನದ ಬಳಿ ಗೋ ಫಸ್ಟ್ ಏರ್​ಲೈನ್​ಗೆ ಸೇರಿರುವ ಸ್ವಿಫ್ಟ್ ಡಿಜೈರ್ ಕಾರು ದಿಢೀರ್ ಆಗಮಿಸಿ ವಿಮಾನದಡಿ ಸಿಲುಕಿದೆ. ಇಂಡಿಯೋ ಕಂಪನಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Last Updated : Aug 2, 2022, 4:11 PM IST

ABOUT THE AUTHOR

...view details