ಕರ್ನಾಟಕ

karnataka

ETV Bharat / bharat

ಮದುವೆ ವಿಷ್ಯ ಮುಚ್ಚಿಟ್ಟು ಅನೈತಿಕ ಸಂಬಂಧ: ಗೊತ್ತಾಗುತ್ತಿದ್ದಂತೆ ಮರ್ಮಾಂಗ ಕತ್ತರಿಸಿದ ಪ್ರೇಯಸಿ! - Cut a persons private parts

ಮದುವೆಯಾಗಿದ್ದರೂ ಅಕ್ರಮವಾಗಿ ಸಂಬಂಧ ಬೆಳೆಸಿಕೊಂಡು ಚೆಲ್ಲಾಟವಾಡುತ್ತಿದ್ದ ವ್ಯಕ್ತಿಗೆ ಪ್ರಿಯತಮೆಯೇ ಬುದ್ಧಿ ಕಲಿಸಿದ್ದಾಳೆ.

a-girlfriend-cut-her-boyfriends-private-part
ಬೇಕೇ ಬೇಕು ನೀನು ನಂಗೇ ಬೇಕು

By

Published : Dec 20, 2022, 12:41 PM IST

ರಾಜೋಲು(ಆಂಧ್ರಪ್ರದೇಶ):ಮದುವೆಯಾಗಿ ಮಕ್ಕಳಿದ್ದರೂ ಅಕ್ರಮವಾಗಿ ಸಂಬಂಧ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬನ ಖಾಸಗಿ ಅಂಗವನ್ನು ಪ್ರಿಯತಮೆಯೇ ಬ್ಲೇಡ್​​ನಿಂದ ಕತ್ತರಿಸಿದ್ದಾಳೆ. ಆಂಧ್ರಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಏನಾಯ್ತು?:ರಾಜೋಲು ಮಂಡಲದ ವ್ಯಕ್ತಿಯೊಬ್ಬ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ. ಆದ್ರೆ ಈ ವ್ಯಕ್ತಿಗೆ ಮೊದಲೇ ಮದುವೆಯಾಗಿರುವ ವಿಷಯ ಅರಿತ ಪ್ರಿಯತಮೆ ಕುಪಿತಗೊಂಡಿದ್ದಾಳೆ. ಡಿಸೆಂಬರ್​ 17 ರಂದು ಯಾರೂ ಇಲ್ಲದ ವೇಳೆ ಆತನನ್ನು ಮನೆಗೆ ಕರೆಯಿಸಿಕೊಂಡು ಇದೇ ವಿಚಾರವಾಗಿ ಜಗಳ ತೆಗೆದಿದ್ದಾಳೆ.

ನೀನು ಇನ್ನೊಬ್ಬಾಕೆಯ ಜೊತೆಗೆ ವಿವಾಹವಾಗಿದ್ದು ನನಗೆ ತಿಳಿದಿದೆ. ಇದನ್ನು ನಾನು ಒಪ್ಪುವುದಿಲ್ಲ. ನೀನು ನನಗೆ ಬೇಕೇ ಬೇಕು ಎಂದು ವಾದಿಸಿದ್ದಾಳೆ. ಬಳಿಕ ನಡೆದ ಗಲಾಟೆಯ ವೇಳೆ ಕೋಪದಲ್ಲಿ ಆಕೆ ಬ್ಲೇಡ್​ನಿಂದ ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಇದರಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿದೆ. ಬಳಿಕ ಆತನನ್ನು ರಾಜೋಲು ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಕುರಿತು ದೂರು ನೀಡಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಓದಿ:ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಸಾಲವೇ ಕುಟುಂಬಕ್ಕೆ ಶೂಲವಾಯ್ತಾ?

ABOUT THE AUTHOR

...view details