ವಿಶಾಖಪಟ್ಟಣಂ (ಆಂಧ್ರಪದೇಶ): ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಯುವತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿಕೊಂಡು ಬಂದ ಸಾಹಸಮಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಶಾಖಪಟ್ಟಣಂ ಮತ್ತು ವಿಜಯನಗರಂ ಜಿಲ್ಲೆ ನಡುವೆ ಬರುವ ಚಂಪಾವತಿ ನದಿಯಲ್ಲಿ ಯುವತಿ ತನ್ನ ಸಹೋದರರ ನೆರವಿನೊಂದಿಗೆ ನದಿಯಲ್ಲಿ ಈಜಿ ಮತ್ತೊಂದು ದಡ ಸೇರಿದ್ದಾರೆ.
ವಿಜಯನಗರಂ ಜಿಲ್ಲೆಯ ಮರಿವಲಸ ಗ್ರಾಮದ ಯುವತಿ ವಿಶಾಖಪಟ್ಟಣಂನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಉದ್ಯೋಗ ಬಡ್ತಿಗಾಗಿ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಚಂಪಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೋಣಿಗಳ ಸೇವೆಯನ್ನು ನಿಲ್ಲಿಸಲಾಗಿದೆ. ಪರೀಕ್ಷೆಗೆ ಹೋಗಲೇಕೆಂಬ ಛಲದಿಂದ ಯುವತಿ ನದಿಯಲ್ಲಿ ಈಜಿ ಬರುವ ನಿರ್ಧಾರಕ್ಕೆ ಬಂದಿದ್ದಾರೆ.