ವಡೋದರಾ (ಗುಜರಾತ್):ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಬಳಿಕ ಅತ್ಯಾಚಾರ ಎಸಗಿರುವ ಘಟನೆ ವಡೋದರಾದಲ್ಲಿ ನಡೆದಿದೆ. ಜಿಲ್ಲೆಯ ಸಾವ್ಲಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆಯೇ ಇನ್‌ಸ್ಟಾಗ್ರಾಮ್ ಮೂಲಕ ಆರೋಪಿಯ ಪರಿಚಯವಿತ್ತು ಹಾಗೂ ಕ್ರಮೇಣ ಆತನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದೆ ಎಂದು ಎರಡನೇ ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತೆ ನೀಡಿದ ದೂರಿನಲ್ಲಿ ಏನಿದೆ?:ಫೈಝಲ್ ಝಾಕಿರ್ ದಿವಾನ್ ಎಂದು ಗುರುತಿಸಲಾದ ಆರೋಪಿಯು ತನ್ನನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ್ದಲ್ಲದೇ ತನ್ನ ಮೇಲೆ ಜಾತಿ ನಿಂದನೆಗಳನ್ನು ಎಸೆದಿದ್ದಾನೆ ಎಂದು ಯುವತಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಫೈಝಲ್ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರಿಂದ ತನ್ನನ್ನು ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಉಪಪತ್ನಿಯಾಗಿ ಇಟ್ಟುಕೊಳ್ಳುವುದಾಗಿ ಫೈಝಲ್ ಹೇಳುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವೀಕೆಂಡ್ ಹಿನ್ನೆಲೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು
ಅತ್ಯಾಚಾರವೆಸಗುವ ಮುನ್ನ ಸಂತ್ರಸ್ತೆ ಮೇಲೆ ಹಲ್ಲೆ:ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ ಹಾಗೂ ವಿರೋಧಿಸಲು ಪ್ರಯತ್ನಿಸಿದರೆ, ಕೃತ್ಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ. ಅತ್ಯಾಚಾರವೆಸಗುವ ಮುನ್ನ ಆರೋಪಿ ತನಗೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.
ಇದನ್ನೂ ಓದಿ:ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮದ್ರಾಸ್ ಐಐಟಿಯ ಪಿಹೆಚ್‌ಡಿ ವಿದ್ಯಾರ್ಥಿ
ಪೊಲೀಸರು ಹೇಳಿದ್ದೇನು?:ಪೊಲೀಸರ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ ಬಳಿಕ ಯುವತಿ ಮೇಲೆ ಯುವಕ ಅತ್ಯಾಚಾರವೆಸಗಿರುವ ಘಟನೆ ವಡೋದರಾ ಜಿಲ್ಲೆಯ ಸಾವ್ಲಿ ಪ್ರದೇಶದಲ್ಲಿ ಜರುಗಿದೆ. ಯುವತಿ ಮರ್ಯಾದೆಗೆ ಹೆದರಿ ಸುಮ್ಮನಿದ್ದಳು. ಆದರೆ, ಇತ್ತೀಚೆಗೆ ಚಿತ್ರಹಿಂಸೆಯನ್ನು ಸಹಿಸಲಾರದೇ ಸಾವ್ಲಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾಳೆ.
ಆರೋಪಿಯ ವಿರುದ್ಧ ಐಪಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು. ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣದ ತನಿಖೆಯನ್ನು ಡೆಪ್ಯುಟಿ ಎಸ್ಪಿ ಸಿಎನ್ ಚೌಧರಿ ನಡೆಸುತ್ತಿದ್ದಾರೆ ಎಂದು ಸಾವಳಿ ಪೊಲೀಸ್ ಠಾಣೆ ಅಧಿಕಾರಿ ಎಂ.ಕಮಾಡಿಯಾ ತಿಳಿಸಿದ್ದಾರೆ.
ಮದ್ರಾಸ್ ಐಐಟಿಯ ಪಿಹೆಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ:ಐಐಟಿ ಮದ್ರಾಸ್‌ನ ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿಯೊಬ್ಬರು ತಮಿಳುನಾಡು ರಾಜ್ಯದ ಚೆನ್ನೈ ನಗರದ ವೆಲಚೇರಿ ವಸತಿ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾವಿಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು, ತಮ್ಮ ಫೋನ್ನಲ್ಲಿ ಸ್ಟೇಟಸ್ ಹಾಕಿದ ವಿದ್ಯಾರ್ಥಿ "ಕ್ಷಮಿಸಿ, ಚೆನ್ನಾಗಿಲ್ಲ, ಸಾಕು" ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ 32 ವರ್ಷದ ಸಚಿನ್ ಕುಮಾರ್ ಜೈನ್ ಮೃತ ವಿದ್ಯಾರ್ಥಿ. ಇವರು ಶುಕ್ರವಾರ ಬೆಳಿಗ್ಗೆ ಎಂದಿನಂತೆ ಐಐಟಿ-ಮದ್ರಾಸ್ ಕಾಲೇಜ್ಗೆ ಹೋಗಿದ್ದರು. ಮಧ್ಯಾಹ್ನ 12ರ ಸುಮಾರಿಗೆ ಇಬ್ಬರು ಸ್ನೇಹಿತರಿಗೆ ಮಾತ್ರ ಮಾಹಿತಿ ನೀಡಿ ತಾವು ವಾಸವಿದ್ದ ಬಾಡಿಗೆ ಮನೆಗೆ ಹಿಂದಿರುಗಿದರು. ರೂಮ್ಗೆ ಬಂದ ಕೂಡಲೇ ತಮ್ಮ ಫೋನ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವೆಲಾಚೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತು ಎಸೆದ ವ್ಯಕ್ತಿ ಅರೆಸ್ಟ್: ನಾಲ್ವರು ಪೊಲೀಸರು ಸಸ್ಪೆಂಡ್