ತಮಿಳುನಾಡು : ಪಾದ್ರಿಯೊಬ್ಬರು ಚಾಟಿ ಮತ್ತು ಕೋಲಿನಿಂದ ಹೊಡೆದ ನಂತರ ಅನುಮಾನಾಸ್ಪದ ರೀತಿಯಲ್ಲಿ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆ ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದೆ.
ವೀರ ಸೆಲ್ವಂ ಎಂಬುವರು ತನ್ನ ಮಗಳು ಧರಣಿ ಜೊತೆ ಉಚಿಪುಲಿ ಬಳಿಯ ಕೊರವಳ್ಳಿಯಲ್ಲಿ ವಾಸವಾಗಿದ್ದರು. ಧರಣಿಯ ಆರೋಗ್ಯ ಸ್ಥಿತಿ ಹಠಾತ್ತನೆ ಕುಸಿದ ಕಾರಣ, ಆಕೆಯ ತಂದೆ ಅವಳನ್ನು ಪಾದ್ರಿಯ ಬಳಿಗೆ ಕರೆದೊಯ್ದಿದ್ದರು. ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಮತ್ತೆ ಅವಳನ್ನು ಬೇರೆ ಪಾದ್ರಿಯ ಬಳಿಗೆ ಕರೆದೊಯ್ಯಲಾಯಿತು. ಆರೋಗ್ಯ ಸರಿಪಡಿಸುವುದಾಗಿ ಹೇಳಿದ ಪಾದ್ರಿ ಪೂಜೆ ಆರಂಭಿಸಿದ್ದಾನೆ. ಪೂಜೆಯ ಸಮಯದಲ್ಲಿ ಆ ಪಾದ್ರಿ ಚಾಟಿ ಮತ್ತು ಕೋಲನ್ನು ಬಳಸಿ ಹೊಡೆದ ನಂತರ ಯುವತಿ ಪ್ರಜ್ಞೆ ತಪ್ಪಿದ್ದಳು.