ನಾಗ್ಪುರ್(ಮಹಾರಾಷ್ಟ್ರ):ಚಿಕ್ಕಪ್ಪ, ಚಿಕ್ಕಮ್ಮ ತನ್ನ ಖಾಸಗಿ ಡೈರಿ ಓದಿದ್ದಕ್ಕಾಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಾರಾಷ್ಟ್ರದ ನಾಗ್ಪುರ್ದಲ್ಲಿ ಈ ಘಟನೆ ನಡೆದಿದೆ. ಉನ್ನತ ಶಿಕ್ಷಣ ಪಡೆದುಕೊಂಡಿದ್ದ ಯುವತಿ ಈ ನಿರ್ಧಾರ ಕೈಗೊಂಡಿದ್ದಾಳೆ.
ಉದ್ದೇಶಪೂರ್ವಕವಾಗಿ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನನ್ನ ವೈಯಕ್ತಿಕ ಡೈರಿಯಲ್ಲಿನ ಖಾಸಗಿ ವಿಷಯ ಓದಿದ್ದಾರೆಂದು ಮನನೊಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಗ್ಪುರ್ ಜಿಲ್ಲೆಯ ಸಾವ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಧಾಪೇವಾಡದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಯುವತಿಯನ್ನ ನಿಕಿತಾ ಎಂದು ಗುರುತಿಸಲಾಗಿದೆ. ಸಹೋದರ ಪಂಕಜ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಚಿಕ್ಕಪ್ಪ ರತ್ನಾಕರ್ ಮತ್ತು ಚಿಕ್ಕಮ್ಮ ಮಂಗಳಾ ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ರತ್ನಾಕರ್ ಕಾಲೇಜ್ವೊಂದರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡ್ತಿದ್ದಾರೆ.