ಕರ್ನಾಟಕ

karnataka

ETV Bharat / bharat

ತೈಲ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್​... ಪೈಪ್​ಲೈನ್​​ಗೆ ರಂಧ್ರ ಕೊರೆದ ಭೂಪರು! - ಪೈಪ್​ಲೈನ್​​ಗೆ ರಂಧ್ರ ಮಾಡಿದ ಭೂಪರು

ಪೈಪ್​ಲೈನ್​ಗೆ ರಂಧ್ರ ಮಾಡಿ ಕಚ್ಚಾ ತೈಲ ಕಳ್ಳತನ ಮಾಡಲು ಗ್ಯಾಂಗ್​ವೊಂದು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.

ತೈಲ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್
ತೈಲ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್

By

Published : Apr 15, 2021, 3:53 PM IST

ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಕಚ್ಚಾ ತೈಲ ಕಳ್ಳತನ ಮಾಡುವ ಉದ್ದೇಶದಿಂದ ಗ್ಯಾಂಗ್​ವೊಂದು ಒಎನ್​​ಜಿಸಿ ಪೈಪ್​ಲೈನ್​ಗೆ ರಂಧ್ರ ಕೊರೆದು ಕಳ್ಳತನ ಯತ್ನ ನಡೆಸಿರುವ ಘಟನೆ ನಡೆದಿದೆ.

ತೈಲ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಳಗುಪ್ತಮ್​ ಮಂಡಲದ ವಸಲಾ ತಿಪ್ಪ ಗ್ರಾಮದ ಕರಾವಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತೈಲ ಕಳ್ಳತನ ಮಾಡಲು ಮಧ್ಯರಾತ್ರಿ ಒಎನ್​​ಜಿಸಿ ಪೈಪ್​​ಲೈನ್​ಗೆ ರಂಧ್ರ ಕೊರೆಯಲು ಪ್ರಯತ್ನಿಸಿದ್ದಾರೆ. ಇದನ್ನ ನೋಡಿರುವ ಸ್ಥಳೀಯರು ಅವರನ್ನ ಬೆನ್ನಟ್ಟಿದ್ದಾರೆ.

ಇದನ್ನೂ ಓದಿ: ಕೋವಿಡ್​ನಿಂದ ಸತ್ತವರ ಶವ ಸಾಗಿಸಲು ಇಲ್ಲ ವಾಹನ.. ಟ್ರಕ್​ನಲ್ಲಿ ತುಂಬಿ ಶವಾಗಾರಕ್ಕೆ ರವಾನೆ!

ಈ ವೇಳೆ ಕಳ್ಳರು ತಪ್ಪಿಸಿಕೊಳ್ಳುವ ಉದ್ದೇಶದಿಂದ ಓಡಿ ಹೋಗಿದ್ದಾರೆ. ಘಟನಾ ಸ್ಥಳದಲ್ಲಿ ವಾಹನ ಹಾಗೂ ತೈಲ ತುಂಬಲು ತಂದಿದ್ದ ಕ್ಯಾನ್​ ಪತ್ತೆಯಾಗಿವೆ. ಪೈಪ್​ಲೈನ್​ ಕಳ್ಳತನಕ್ಕಾಗಿ ರಂಧ್ರ ಕೊರೆದಿರುವ ಕಾರಣ ಕಚ್ಚಾ ತೈಲ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ABOUT THE AUTHOR

...view details