ಹೈದರಾಬಾದ್:ನಕಲಿ ಗನ್ ಲೈಸನ್ಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, 30 ಸಿಂಗಲ್ ಮತ್ತು ಡಬಲ್ ಬ್ಯಾರಲ್ ಗನ್, ಒಂದು ರಿವಾಲ್ವರ್, 140 ಬುಲೆಟ್‌ಗಳು, 39 ನಕಲಿ ಪರವಾನಗಿಗಳು, 29 ಬಳಕೆಯಾಗದ ಪರವಾನಗಿಗಳು ಮತ್ತು ನಕಲಿ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ಯಾಂಗ್‌ನ ಪ್ರಮುಖ ಮಾಸ್ಟರ್‌ಮೈಂಡ್ ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಕಲಿ ಪರವಾನಗಿಯೊಂದಿಗೆ ಬಂದೂಕು ಖರೀದಿಸಿ ನಂತರ ಅದನ್ನು ಹೈದರಾಬಾದ್‌ನಲ್ಲಿ ವ್ಯಾಪಾರವಾಗಿ ಪರಿವರ್ತಿಸಿದ್ದ. ದೇಶಾದ್ಯಂತ ಅವಕಾಶ ಇದೆ ಎಂಬಂತೆ ನಕಲಿ ಪರವಾನಗಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ಯುವಕರನ್ನು ಹೈದರಾಬಾದ್‌ನ ಕೆಲವು ಖಾಸಗಿ ಕಂಪನಿಗಳು ಮತ್ತು ವಿಐಪಿಗಳಿಗೆ ಭದ್ರತಾ ಸಿಬ್ಬಂದಿಯಾಗಿ ನೇಮಿಸಲಾಗುತ್ತಿತ್ತು.
ಭದ್ರತೆಗೆ ಅಪಾಯವಾಗಿ ಪರಿಣಮಿಸಿರುವ ಈ ಗ್ಯಾಂಗ್‌ನ ಚಟುವಟಿಕೆಗಳಿಗೆ ಹೈದರಾಬಾದ್ ಟಾಸ್ಕ್ ಫೋರ್ಸ್ ಪೊಲೀಸರು ಅಡ್ಡಿಪಡಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಮಾಹಿತಿ ನೀಡಿದ್ದಾರೆ.
ಗ್ರೇಸ್ ಮ್ಯಾನೇಜ್‌ಮೆಂಟ್ ಸೆಕ್ಯುರಿಟಿ ಸರ್ವೀಸ್‌ನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟಕೊಂಡ ರೆಡ್ಡಿ, ಪಶ್ಚಿಮ ಮರೇಡುಪಲ್ಲಿಯ ಜೆರಾಕ್ಸ್ ಅಂಗಡಿ ಮಾಲೀಕ ಐ.ಶ್ರೀನಿವಾಸ್ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ನಕಲಿ ಪರವಾನಗಿ ಸಮಸ್ಯೆ ಸಾರ್ವಜನಿಕರ ಸುರಕ್ಷತೆಗೆ ದೊಡ್ಡ ಅಪಾಯವಾಗಿದೆ ಎಂದು ಸಿ.ವಿ.ಆನಂದ್ ಆತಂಕ ವ್ಯಕ್ತಪಡಿಸಿದ್ದಾರೆ.