ನವೀ ಮುಂಬೈ(ಮಹಾರಾಷ್ಟ್ರ):ರೈಲ್ವೆ ಪ್ಲಾಟ್ ಫಾರ್ಮ್ನಲ್ಲೇ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ್ದ ಪಾಪಿ ತಂದೆಯ ದುಷ್ಕೃತ್ಯ ಬಯಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೀ ಮುಂಬೈನ ಸಂಪದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಟ್ಟಿಕೊಂಡ ಪತ್ನಿಯೊಂದಿಗೆ ನಡೆದ ಜಗಳದಲ್ಲಿ ತಂದೆಯೇ ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ. ಮಗುವನ್ನ ರೈಲ್ವೆ ಪ್ಲಾಟ್ ಫಾರ್ಮ್ನಲ್ಲಿ ಎರಡ್ಮೂರು ಸಲ ಎತ್ತಿ ಒಗೆದಿರುವ ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಪ್ಲಾಟ್ ಫಾರ್ಮ್ನಲ್ಲೇ ಮಗುವಿನ ಕೊಲೆಗೈದ ಪಾಪಿ ತಂದೆ ಬಂಧಿತ ಆರೋಪಿಯನ್ನ ಸಖಲಸಿಂಗ್ ಪವಾರ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಯಾವತ್ಮಲ್ನವನು ಎನ್ನಲಾಗ್ತಿದೆ. ಕುಟುಂಬದೊಂದಿಗೆ ನವೀ ಮುಂಬೈನ ಸಂಪದ ರೈಲ್ವೆ ನಿಲ್ದಾಣದ ಸೇತುವೆ ಕೆಳಗೆ ವಾಸಿಸುತ್ತಿದ್ದ ಈತ, ಜೀವನಕ್ಕಾಗಿ ಕುಟುಂಬದೊಂದಿಗೆ ಭಿಕ್ಷೆ ಬೇಡುತ್ತಿದ್ದ.
ಇದನ್ನೂ ಓದಿರಿ:'ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ..': ಅಧಿವೇಶನದಲ್ಲಿ ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್
ಸಖಲಸಿಂಗ್ ಹಾಗೂ ಆತನ ಪತ್ನಿ ಮೇಲಿಂದ ಮೇಲೆ ಜಗಳವಾಡುತ್ತಿದ್ದರು. ಘಟನೆಯ ಹಿಂದಿನ ದಿನ ಕೂಡ ಹೆಂಡತಿ ಜೊತೆ ಜಗಳವಾಡಿದ್ದ. ಇದಾದ ಮರುದಿನ ಮಗುವನ್ನ ತೆಗೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಪ್ಲಾಟ್ಫಾರ್ಮ್ನಲ್ಲಿ ಮಗುವನ್ನು ಎತ್ತಿ ಒಗೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಸಖಲಸಿಂಗ್ಗೆ ಇಬ್ಬರು ಪತ್ನಿಯರಂತೆ. ಮೃತ ಬಾಲಕ ಪ್ರಶಾಂತ್ ಮೊದಲ ಪತ್ನಿಯ ಮಗನೆಂದು ತಿಳಿದು ಬಂದಿದೆ.