ಕರ್ನಾಟಕ

karnataka

ETV Bharat / bharat

ಮುಂಬೈನ 15 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ: ಇಬ್ಬರು ಸಾವು - ಅಗ್ನಿ ಅವಘಡ

ಮುಂಬೈ ನಗರದ ಕಾಂಡಿವಳಿಯಲ್ಲಿರುವ 15 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ನಿವಾಸಿಗಳು ಸಾವನ್ನಪ್ಪಿದ್ದಾರೆ.

A fire
A fire

By

Published : Nov 7, 2021, 9:39 AM IST

Updated : Nov 7, 2021, 10:28 AM IST

ಮುಂಬೈ: ನಗರದ ಕಾಂಡಿವಳಿ ಮಥುರಾದಾಸ್ ರಸ್ತೆಯಲ್ಲಿರುವ 15 ನೇ ಅಂತಸ್ತಿನ ಬಹುಮಹಡಿ ಕಟ್ಟಡವೊಂದರಲ್ಲಿ ಶನಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಪಶ್ಚಿಮ ಕಾಂಡಿವಳಿಯ ಮಥುರಾದಾಸ್ ರಸ್ತೆಯಲ್ಲಿರುವ ಹಂಸ ಹೆರಿಟೇಜ್‌ 14 ನೇ ಮಹಡಿಯ ಚಿನ್ನದ ಅಂಗಡಿ ಕಟ್ಟಡದಲ್ಲಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ದೀಪಾವಳಿ ಹಬ್ಬದ ಹಿನ್ನೆಲೆ ದೀಪಗಳನ್ನು ಹಚ್ಚಿಡಲಾಗಿತ್ತು. ಈ ವೇಳೆ ಮನೆಗೆ ಹಾಕಿದ್ದ ಪರದೆಗಳಿಗೆ ಬೆಂಕಿ ತಗುಲಿದ್ದು, ಬೆಂಕಿಯ ಜ್ವಾಲೆಗೆ ಸಿಲುಕಿ ಇಬ್ಬರು ನಿವಾಸಿಗಳು ಗಾಯಗೊಂಡಿದ್ದರು. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

15 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ

ಈ ಕುರಿತು ಮಾಹಿತಿ ನೀಡಿರುವ ವಿಭಾಗೀಯ ಅಗ್ನಿಶಾಮಕ ದಳದ ಅಧಿಕಾರಿ ಸಂಪರ್ಕ ಕರಾಡೆ, ಕಟ್ಟಡದ ಫ್ಲಾಟ್‌ನಲ್ಲಿ ಏಳು ಜನರು ಸಿಲುಕಿದ್ದರು, ನಿನ್ನೆ ತಡರಾತ್ರಿವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸ್ಥಳಾಂತರಿಸಿದ್ದಾರೆ. ಜೊತೆಗೆ ಬೆಂಕಿ ನಂದಿಸುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಘಟನೆ ಹಿನ್ನೆಲೆ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

Last Updated : Nov 7, 2021, 10:28 AM IST

ABOUT THE AUTHOR

...view details