ಕರ್ನಾಟಕ

karnataka

ETV Bharat / bharat

ಟ್ರಾಫಿಕ್​​ ಪೊಲೀಸ್​​-ಮಹಿಳೆ ನಡುವೆ ನಡುರಸ್ತೆಯಲ್ಲೇ ಫೈಟ್​ - ವಿಡಿಯೋ ವೈರಲ್​ - ಟ್ರಾಫಿಕ್​ ಪೊಲೀಸ್​

ಮಹಿಳೆ ಹಾಗೂ ಟ್ರಾಫಿಕ್ ಪೊಲೀಸ್​ ನಡುವೆ ನಡುರಸ್ತೆಯಲ್ಲೇ ಜಗಳವಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

assault with female driver
assault with female driver

By

Published : Aug 10, 2021, 5:05 PM IST

ಜೈಪುರ್(ರಾಜಸ್ಥಾನ): ಟ್ರಾಫಿಕ್​ ಪೊಲೀಸ್​ ಹಾಗೂ ಮಹಿಳೆಯೋರ್ವಳ ನಡುವೆ ನಡುರಸ್ತೆಯಲ್ಲೇ ಮಾರಾಮಾರಿಯಾಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್​​ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ.

ಟ್ರಾಫಿಕ್​​ ಪೊಲೀಸ್​​-ಮಹಿಳೆ ನಡುವೆ ನಡುರಸ್ತೆಯಲ್ಲೇ ಫೈಟ್​

ಸ್ಕೂಟಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಟ್ರಾಫಿಕ್​ ಪೊಲೀಸ್​ ಅಡ್ಡ ಹಾಕಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಇದರ ವಿಡಿಯೋ ಮಾಡಿ, ವೈರಲ್​ ಮಾಡಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ ಎರಡು ಕಡೆಯ ಕೆಲವರು ಸ್ಥಳದಲ್ಲಿ ಜಮಾವಣೆಗೊಂಡಿದ್ದಾರೆ. ಈ ವೇಳೆ ಜಗಳ ಮತ್ತಷ್ಟು ಉದ್ವಿಗ್ನಗೊಂಡಿದೆ. ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಈ ಘಟನೆ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯಿಂದ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಆಧಾರದ ಮೇಲೆ ಪೊಲೀಸರು ಇದೀಗ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಓದುವ ವಿಚಾರಕ್ಕೆ ಜಗಳ: ಕರಾಟೆ ಬೆಲ್ಟ್​ನಿಂದ ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ ಮಗಳು

ABOUT THE AUTHOR

...view details