ರಾಂಚಿ:ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪ್ರಶ್ನಿಸಿದ್ದಕ್ಕೆ ಹರಿಯಾಣದಲ್ಲಿ ಡಿಎಸ್ಪಿ ಮೇಲೆ ವಾಹನ ಹರಿಸಿ ಕೊಲೆ ಮಾಡಿದ ಘಟನೆ ನಡುವೆಯೇ ಅಂಥಹದ್ದೇ ಇನ್ನೊಂದು ಕೃತ್ಯ ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಪಿಎಸ್ಐ ಅನ್ನು ವಾಹನ ಹರಿಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಾಹನ ತಪಾಸಣೆಯ ಸಂದರ್ಭದಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಸಂಧ್ಯಾ ಟೋಪ್ನೋ ಸಾವನ್ನಪ್ಪಿದ್ದಾರೆ. ಇವರನ್ನು ತೂಪುದಾನ ಪ್ರದೇಶದ ಪ್ರಭಾರಿಯಾಗಿ ನೇಮಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ.