ಸಿಂಹ ಅಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲ, ಸಾಧು ಪ್ರಾಣಿಗಳಿಗೂ ಅಂಜಿಕೆ. ಅಂಥದ್ರಲ್ಲಿ ಇಲ್ಲೊಂದು ನಾಯಿ, ಯಾವುದೇ ಭೀತಿಯಿಲ್ಲದೆ ಸಿಂಹಿಣಿ ಎದುರು ಹೋರಾಡಿದೆ.
ಶ್ವಾನದ ಮುಂದೆ ನಡೆಯದ ವನರಾಜನ ಆಟ.. ವಿಡಿಯೋ ವೈರಲ್ - ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವಿನ್ ಕಸ್ವಾನ್
ದಾರಿ ತಪ್ಪಿ ಕಾಡಿಗೆ ಬಂದಿದ್ದ ನಾಯಿಯನ್ನು ಸಿಂಹ ಬೆನ್ನಟ್ಟಿದೆ. ಆದರೆ, ಸ್ವಲ್ಪ ದೂರ ಓಡಿ ಬಂದ ನಾಯಿ, ತಿರುಗಿಬಿದ್ದು, ಸಿಂಹದತ್ತ ಹೆಜ್ಜೆ ಹಾಕಿ ಬೊಗಳಿದೆ. 20 ಸೆಕೆಂಡ್ಗಳಿಗೂ ಹೆಚ್ಚು ಕಾಲ ಎರಡೂ ಪ್ರಾಣಿಗಳು ಜಗಳವಾಡಿರುವ ದೃಶ್ಯವನ್ನು ಅಧಿಕಾರಿ ಸೆರೆ ಹಿಡಿದಿದ್ದಾರೆ.
ಸಿಂಹಿಣಿಯೊಂದಿಗೆ ನಾಯಿ ಹೋರಾಡಿರುವ ಒಂದೂವರೆ ನಿಮಿಷದ ವಿಡಿಯೋ ಕ್ಲಿಪ್ವೊಂದನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವಿನ್ ಕಸ್ವಾನ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ದಾರಿ ತಪ್ಪಿ ಕಾಡಿಗೆ ಬಂದಿದ್ದ ನಾಯಿಯನ್ನು ಸಿಂಹ ಬೆನ್ನಟ್ಟಿದೆ. ಆದರೆ, ಸ್ವಲ್ಪ ದೂರ ಓಡಿ ಬಂದ ನಾಯಿ, ತಿರುಗಿಬಿದ್ದು, ಸಿಂಹದತ್ತ ಹೆಜ್ಜೆ ಹಾಕಿ ಬೊಗಳಿದೆ. 20 ಸೆಕೆಂಡ್ಗಳಿಗೂ ಹೆಚ್ಚು ಕಾಲ ಎರಡೂ ಪ್ರಾಣಿಗಳು ಜಗಳವಾಡಿರುವ ದೃಶ್ಯವನ್ನು ಅಧಿಕಾರಿ ಸೆರೆ ಹಿಡಿದಿದ್ದಾರೆ.
‘ಡಾಗ್ ವರ್ಸಸ್ ಲಯನ್’ ಟ್ಯಾಗ್ಲೈನ್ನಡಿ ಜೀವನದಲ್ಲಿ ಈ ರೀತಿ ಹೆಚ್ಚಿನ ವಿಶ್ವಾಸ ಬೇಕು ಎಂದು ಬರೆದಿರುವ ಶ್ರೀ ಕಸ್ವಾನ್ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೈಕ್ರೊಬ್ಲಾಗಿಂಗ್ನಲ್ಲಿ 1.6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.