ಪೆಬ್ಬೇರು(ತೆಲಂಗಾಣ):ಯುವಕನೊಂದಿಗೆ ಸ್ನೇಹ, ಸಲುಗೆ ಹೊಂದಿರುವ ವಿಚಾರ ಸಂಬಂಧ ಜಗಳ ನಡೆದು ತಂದೆಯೊಬ್ಬ 15 ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾದ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಎಂಟು ಬಾರಿ ಕೊಡಲಿಯಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಾಳೆ.
ವನಪರ್ತಿ ಜಿಲ್ಲೆಯ ಪೆಬ್ಬೇರು ಮಂಡಲದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. 10ನೇ ತರಗತಿ ಓದುತ್ತಿದ್ದ ಮಗಳು ಯುವಕನೊಬ್ಬನೊಂದಿಗೆ ಸ್ನೇಹ ಹೊಂದಿರುವುದು ತಂದೆ ರಾಜಶೇಖರ್ ಕೋಪಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಬಾಲಕಿಗೆ ಈ ಹಿಂದೆ ಹಲವು ಬಾರಿ ಬುದ್ಧಿಮಾತು ಕೂಡಾ ಹೇಳಿದ್ದರು.
ಮಂಗಳವಾರ ಬಾಲಕಿಯ ತಾಯಿ ಕೃಷಿ ಕೆಲಸಕ್ಕೆ ಹೋಗಿದ್ದು, ಮತ್ತೊಬ್ಬ ಮಗಳು ಮತ್ತು ಮಗ ಕೂಡ ಮನೆಯಲ್ಲಿ ಇರಲಿಲ್ಲ. ಈ ವೇಳೆ ಮನೆಯಲ್ಲಿದ್ದ ತಂದೆ ಮಗಳಿಗೆ ಇದೇ ವಿಚಾರವಾಗಿ ಸಂತೈಸಲು ಯತ್ನಿಸಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಕುಪಿತಗೊಂಡ ಆರೋಪಿ ರಾಜಶೇಖರ್ ವಿವೇಚನೆ ಕಳೆದುಕೊಂಡು ಮಗಳ ಕುತ್ತಿಗೆಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಗೀತಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ತಂದೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಕೊಲೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಸಂಗ್ರಹಿಸುತ್ತಿದ್ದೇವೆ ಎಂದು ಡಿಎಸ್ಪಿ ಆನಂದರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ಕೇವಲ 2500 ರೂಗಾಗಿ ಕೈಯನ್ನೇ ಕತ್ತರಿಸಿದ ದುರುಳರು.. ತಲೆಮರೆಸಿಕೊಂಡವರಿಗೆ ಪೊಲೀಸರ ಶೋಧ