ಸುರ್ಗುಜ(ಛತ್ತೀಸ್‌ಗಢ):ಹಿಂದಿನ ಸಾಂಪ್ರದಾಯಿಕ ಕೃಷಿ ಪದ್ಧತಿ ಬಿಟ್ಟು ಇಂದಿನ ಯುವರೈತರು ಹೊಸ ಕೃಷಿಯತ್ತ ವಾಲುತ್ತಿದ್ದಾರೆ. ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಿಕೊಳ್ಳುವ ಜತೆಗೆ ಕಡಿಮೆ ಖರ್ಚು ಹೆಚ್ಚು ಅದಾಯ ಪಡೆಯುತ್ತಿದ್ದಾರೆ. ಛತ್ತೀಸ್‌ಗಢ ಸುರ್ಗುಜ ಜಿಲ್ಲೆಯ ಅಂಬಿಕಾಪುರದ ರೈತರೊಬ್ಬರು ಹೊಸ ವಿಧಾನದಲ್ಲಿ ಟೊಮೆಟೊ ಕೃಷಿ ಮಾಡಿ, ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ 3ರಿಂದ 4 ಬರುವ ಟೊಮೆಟೊ ಗಿಡ . ಈ ರೈತ ಹೊಲದಲ್ಲಿ ಇಸ್ರೇಲ್ ಮಾದರಿ ಅನುಸರಿಸಿದ್ದು,ಸುಮಾರು 8 ರಿಂದ 9 ಅಡಿ ಎತ್ತರದಲ್ಲಿ ಟೊಮೆಟೊ ಗಿಡ ಬೆಳೆದು ನಿಂತು,ಹೆಚ್ಚು ಇಳುವರಿ ನೀಡುತ್ತಿವೆ. ಈ ಕುರಿತು ಈಟಿವಿ ಭಾರತ ಪ್ರತ್ಯೇಕ್ಷ ವರದಿ ಪ್ರಕಟಿಸಿದೆ.
8ರಿಂದ 9 ಅಡಿ ಟೊಮೆಟೊ ಗಿಡ: ಛತ್ತೀಸ್ಗಢದ ಅಂಬಿಕಾಪುರದ ಪ್ರತೀಕ್ ಬಾನಿಕ್ ಎಂಬ ಯುವ ರೈತ ತನ್ನ 2 ಎಕರೆ (ಭಗವಾನ್‌ಪುರದ)ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಆದರೆ ಟೊಮೆಟೊ ಗಿಡಗಳು ಬರೊಬ್ಬರಿ 8ರಿಂದ 9 ಅಡಿ ಎತ್ತರ ಬೆಳೆದಿವೆ. ಸಾಮಾನ್ಯವಾಗಿ ಇಷ್ಟು ಎತ್ತರ ಟೊಮೆಟೊ ಗಿಡ ಬೆಳೆಯುವುದಿಲ್ಲ.
ಆದರೆ ಈ ರೈತ ಟೊಮೆಟೊ ಗಿಡಗಳನ್ನು ಇಷ್ಟು ಎತ್ತರ ಬೆಳೆಸಿದ್ದು, ಈ ಭಾಗದ ರೈತರಲ್ಲಿ ಅಚ್ಚರಿ ಮೂಡಿಸಿದೆ. ಬಹಳಷ್ಟು ಪ್ರಗತಿಪರ ರೈತರು , ರೈತ ಪ್ರತೀಕ್ ಬಾನಿಕ್ ಅವರನ್ನು ಭೇಟಿ ಮಾಡಿ ಟೊಮೆಟೊ ಬೆಳೆ ಬಗ್ಗೆ ತಿಳಿದು ತಾವು ಈ ಬೆಳೆ ಬೆಳೆಯಲೂ ಸಜ್ಜಾಗುತ್ತಿದ್ದಾರೆ.
ಇಸ್ರೇಲ್ ತಂತ್ರಜ್ಞಾನ ಬಳಕೆ:ಯುವ ರೈತ ಪ್ರತೀಕ್ ಈಟಿವಿ ಭಾರತ್ ಜತೆಗೆ ಮಾತನಾಡಿ, ಇಸ್ರೇಲಿ ಮಾದರಿ ಡ್ರಿಫ್ ಬಳಸಿ, ಟೊಮೆಟೊ ಬೆಳೆ ಬೆಳೆಯಲಾಗಿದೆ. ಈ ಟೊಮೆಟೊ ನಾಟಿಯಿಂದ ಹಿಡಿದು ಫಸಲು ಬರುವರೆಗೂ ಇಸ್ರೇಲ್ ತಂತ್ರ ಬಳಸಿದ್ದೇವೆ. ಆರಂಭದಿಂದ ಹಿಡಿದು ಇಳುವರಿ ಬರುವರೆಗೂ ಪೋಷಕಾಂಶಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿದ್ದೇವೆ. ನೀರು,ರಸಗೊಬ್ಬರ, ಔಷಧ ಬಳಕೆಯಲ್ಲೂ ಕೊರತೆ ಮಾಡಿಲ್ಲ.
ಹೀಗಾಗಿ ಟೊಮಟೊ ನಾಟಿಯೂ ಉದ್ದ ಹೆಚ್ಚಿಸಿದೆ. ಈ ಭಾರಿ ನಮಗೆ ಖರ್ಚು ಕಡಿಮೆ ಬಂಪರ್ ಆದಾಯ ಸಿಕ್ಕಿದೆ. ಸಾಂಪ್ರದಾಯಿಕ ಕೃಷಿಯಿಂದ ಇಷ್ಟು ಲಾಭ ಕೈಗೆ ಸಿಗದು ಎಂದು ತಿಳಿಸಿದ್ದಾರೆ.
ನಾಟಿ ಬೇಸಾಯ ಪದ್ಧತಿ: ಈ ಹಿಂದೆ ಹೈಬ್ರಿಡ್ ಕೃಷಿ ಇತ್ತು, ಈಗ ನಾಟಿ ಕೃಷಿ (ಆಧುನಿಕ ಕೃಷಿ ಇಸ್ರೇಲಿ ತಂತ್ರಜ್ಞಾನ) ಪದ್ಧತಿ ಕಡೆಗೆ ರೈತರು ಒಲವು ತೋರುತ್ತಿದ್ದಾರೆ. ಈ ನಾಟಿ ಕೃಷಿಯಿಂದ ಯುವ ರೈತರು ಆಸಕ್ತಿಯಿಂದ ವ್ಯವಸ್ಥಿತವಾಗಿ ಕೃಷಿ ಮಾಡಿದರೆ, ಹೆಚ್ಚು ಲಾಭ ಕೈ ಸೇರುವುದು ಖಚಿತ. ಇನ್ನೊಬ್ಬರಲ್ಲಿ ಹೋಗಿ ಕೆಲಸ ಮಾಡಿದರೂ, ವರ್ಷ ಪೂರ್ತಿ ದುಡಿದರೂ ಇಷ್ಟು ಅದಾಯ ಸಿಗದು. ರೈತರು ತಮ್ಮ ಜಮೀನು ಅಥವಾ ಬಾಡಿಗೆ ಜಮೀನು ಪಡೆದು ಇಸ್ರೇಲ್ ಮಾದರಿ ಕೃಷಿ ಮಾಡಿದರೆ, ಖಂಡಿತ ಮೂರು ತಿಂಗಳಲ್ಲಿ ಕೈಗೆ ಅಧಿಕ ಲಾಭ ಸಿಗಲಿದೆ ಎನ್ನುತ್ತಾರೆ ಪ್ರತೀಕ್.
ಅಪಾರ ಲಾಭ: ರೈತ ಪತೀಕ್ ಅವರು ಎರಡೂ ವರೆ ತಿಂಗಳಿಂದ ಟೊಮೆಟೊ ಕಿತ್ತು ಮಾರಾಟ ಮಾಡುತ್ತಿದ್ದಾರೆ . ಈಗಾಗಲೇ 18 ಬಾರಿ ಟೊಮೆಟೊ ಕೊಯ್ಲು ಮಾಡಿದ್ದಾರೆ. ಇಲ್ಲಿಯವರೆಗೆ ಎರಡು ಲಕ್ಷ ರೂ. ಗಿಂತ ಹೆಚ್ಚು ಆದಾಯ ಗಳಿಸಿದ್ದಾರೆ. ಇನ್ನೂ ಟೊಮೆಟೊ ಗಿಡಗಳು ಹೆಚ್ಚು ಆರೋಗ್ಯಕರ, ಕಾಯಿಗಳಿಂದ ತುಂಬಿವೆ. ಇಸ್ರೇಲ್ ಕೃಷಿ ಮಾದರಿ ಪ್ರಕಾರ 2 ಎಕರೆ ಜಮೀನಿನಲ್ಲಿ 7 ರಿಂದ 8 ಲಕ್ಷ ರೂಪಾಯಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕಡಿಮೆ ಅವಧಿಯ ಇಸ್ರೇಲ್ ಮಾದರಿ ಟೊಮೆಟೊ ಕೃಷಿಗೆ ಸುತ್ತಲಿನ ರೈತರು ಸಹ ಆಕರ್ಷಿತರಾಗಿ, ಹೊಸ ಪ್ರಯೋಗದತ್ತ ಹೆಜ್ಜೆ ಇಟ್ಟಿದ್ದಾರೆ.
ಇದನ್ನೂ ಓದಿ:ವರ್ಷದ 365 ದಿನವೂ ವಿದ್ಯಾರ್ಥಿಗಳಿಗೆ ಪಾಠ!: ನಾಸಿಕ್ನಲ್ಲಿದೆ ವಿಶಿಷ್ಟ ಶಾಲೆ