ರಾಜಮಹೇಂದ್ರವರಂ:ಗಂಡನ ಎರಡನೇ ಮದುವೆಯ ವಿಷಯವನ್ನು ಜೀರ್ಣಿಸಿಕೊಳ್ಳದ ಮಹಿಳೆ ತನ್ನಿಬ್ಬರ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಡಿತೋಟ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ಭೂಪತಿ ಶಿವ ಪಾವನಿ (27), ಆಕೆಯ ತಾಯಿ ಸಂಗಿಶೆಟ್ಟಿ ಕೃಷ್ಣವೇಣಿ (55), ಭೂಪತಿ ಶಿವಪಾವನಿ ಮಕ್ಕಳಾದ ನಿಶಾನ್ (9), ರಿತಿಕಾ (7) ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಆತ್ಮಹತ್ಯೆಗೆ ಕಾರಣ ಶಿವಪಾವನಿ ಗಂಡನ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಶಿವಪಾವನಿ ದಿಕ್ಕು ತೋಚದೇ ಮತ್ತು ಮನಸ್ತಾಪಕ್ಕೆ ಗುರಿಯಾಗಿದ್ದರು ಎನ್ನಲಾಗಿದೆ. ಮೊದಲು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ಅವರ ಪ್ರಾಣ ತೆಗೆದಿದ್ದಾರೆ. ಬಳಿಕ ಶಿವಪಾವನಿ ಮತ್ತು ಆಕೆಯ ತಾಯಿ ಕೃಷ್ಣವೇಣಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ.
ಸುದ್ದಿ ತಿಳಿದ ತಾಡಿತೋಟ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.