ಪೂರ್ವ ಗೋದಾವರಿ(ಆಂಧ್ರಪ್ರದೇಶ): ಕೊರೊನಾ ವೈರಸ್ ಹರಡುವ ಭೀತಿಗೆ ಒಳಗಾಗಿದ್ದ ಕುಟುಂಬವೊಂದು ಬರೋಬ್ಬರಿ ಒಂದೂವರೆ ವರ್ಷದಿಂದ ನಿರ್ಬಂಧ ವಿಧಿಸಿಕೊಂಡು ಕ್ವಾರಂಟೈನ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಪೂರ್ವ ಗೋದಾವರಿ ಜಿಲ್ಲೆಯ ರಾಜೋಲು ಮಂಡಲದ ಕುಟುಂಬವೊಂದು ಈ ರೀತಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವುದು ತಿಳಿದು ಬಂದಿದೆ. ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಕುಟುಂಬದಲ್ಲಿದ್ದು, ತಂದೆಯ ವಿಕಲಚೇತನ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ತುರ್ತು ಸ್ಥಿತಿಯಲ್ಲಿ ತಂದೆ ಹಾಗೂ ಮಗ ಮಾತ್ರ ಮನೆಯಿಂದ ಹೊರ ಬರುತ್ತಿದ್ದರಂತೆ.