ಕರ್ನಾಟಕ

karnataka

ETV Bharat / bharat

ರೈಲು ಅಪಘಾತದಲ್ಲಿ ಬಲಿಯಾದ ಆನೆ ಗರ್ಭಿಣಿಯಾಗಿತ್ತು.. ಮರಣೋತ್ತರ ಪರೀಕ್ಷೆಯಲ್ಲಿ ಬಯಲು

ನಿನ್ನೆ ಕೊಯಮತ್ತೂರು ಸಮೀಪ ರೈಲಿಗೆ ಡಿಕ್ಕಿ ಹೊಡೆದು ಮೂರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ಆ ಪೈಕಿ ಒಂದು ಆನೆ ಗರ್ಭಿಣಿಯಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

pregnant elephant died in train accident
ರೈಲು ಅಪಘಾತದಲ್ಲಿ ಗರ್ಭಿಣಿ ಆನೆ ಬಲಿ

By

Published : Nov 27, 2021, 7:05 PM IST

ಕೊಯಮತ್ತೂರು (ತಮಿಳುನಾಡು):ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ತಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿತ್ತು.

ಕೊಯಮತ್ತೂರು ಸಮೀಪದ ತೊಟ್ಟಂ ಬಳಿ ಎರಡು ಆನೆ ಮರಿಗಳು ಮತ್ತು 25 ವರ್ಷದ ಒಂದು ಹೆಣ್ಣಾನೆ ರೈಲು ಹಳಿ ದಾಟುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು. ಎರಡು ಆನೆ ಮರಿಗಳಲ್ಲಿ ಒಂದು 8 ವರ್ಷದ ಹೆಣ್ಣು ಮರಿ, ಇನ್ನೊಂದು 12 ವರ್ಷದ ಗಂಡು ಮರಿಯಾಗಿತ್ತು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಆನೆಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಇದನ್ನೂ ಓದಿ: ರೈಲು ಡಿಕ್ಕಿಯಾಗಿ ಎರಡು ಮರಿಗಳು ಸೇರಿದಂತೆ ಮೂರು ಆನೆ ಸಾವು

ರೈಲು ಅಪಘಾತದಲ್ಲಿ ಗರ್ಭಿಣಿ ಆನೆ ಬಲಿ

ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಮೃತ ಹೆಣ್ಣಾನೆಯ ಹೊಟ್ಟೆಯಲ್ಲಿ 3 ತಿಂಗಳ ಭ್ರೂಣವಿರುವುದು ಪತ್ತೆಯಾಗಿದೆ. ಮೃತ ಗರ್ಭಿಣಿ ಆನೆಯ ಗರ್ಭದಲ್ಲೇ ಮೃತಪಟ್ಟಿದ್ದ ಆನೆ ಮರಿಯನ್ನು ಹೊರ ತೆಗೆಯಲಾಗಿದೆ.

ABOUT THE AUTHOR

...view details