ಕರ್ನಾಟಕ

karnataka

ETV Bharat / bharat

ಅಸಭ್ಯವಾಗಿ ವರ್ತಿಸಿದ ಮದ್ಯಪಾನಿಗೆ ನಾರಿಮಣಿಯರಿಂದ ಚಪ್ಪಲಿಯೇಟು - ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮೃಣಾಲ್​ ಪೆಂಡ್ಸೆ

ಮದ್ಯಪಾನ ಮಾಡಿ, ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಗೆ ಮಹಿಳೆಯರು ಬೀದಿಯಲ್ಲೇ ಚಪ್ಪಲಿ ಏಟು ನೀಡಿದ್ದಾರೆ.

A drunken man was beaten by sandals by women of BJP Mahila Morcha in Thane
ಅಸಭ್ಯವಾಗಿ ವರ್ತಿಸಿದ್ದಕ್ಕೆ ಮದ್ಯಪಾನಿಗೆ ಚಪ್ಪಲಿಗಳಿಂದ ಥಳಿಸಿದ ನಾರಿಮಣಿಯರು

By

Published : Jul 7, 2021, 9:56 PM IST

ಥಾಣೆ(ಮಹಾರಾಷ್ಟ್ರ):ಮಹಿಳೆಯೋರ್ವಳ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಬಳಿಯ ಮನೋರಮಾ ನಗರದಲ್ಲಿ ನಡೆದಿದೆ.

ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನಡುಬೀದಿಯಲ್ಲೇ ಚಪ್ಪಲಿಗಳಿಂದ ಥಳಿಸಲಾಗಿದೆ. ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮೃಣಾಲ್​ ಪೆಂಡ್ಸೆ ಕೂಡಾ ಆರೋಪಿಗೆ ಥಳಿಸಿದ್ದಾರೆ.

ಮದ್ಯಪಾನಿಗೆ ಥಳಿಸಿದ ಮಹಿಳೆಯರು

ಆರೋಪಿಗೆ ಥಳಿಸಿದ ನಂತರ ಆತನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ದೂರು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಆ ಪ್ರದೇಶದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:2 ರೂಪಾಯಿಗೆ ಔಷಧ​, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್​

ABOUT THE AUTHOR

...view details