ವಿಜಯವಾಡ( ಆಂಧ್ರಪ್ರದೇಶ):ನಾಯಿಯೊಂದು ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಇದೇ ಕಾರಕ್ಕಾಗಿ ಮೆಣಸಿನ ಪುಡಿ, ಚಾಕುಗಳಿಂದ.. ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಈ ಮಹಾ ಸಂಘರ್ಷ ನಡೆದಿದೆ. ಕೆವಿಬಿಪುರಂ ವಲಯದ ಅಂಗೇರಿ ಹೊಂಡ ಗ್ರಾಮದ ನಿವಾಸಿ ಮಹೇಶ್ ಮನೆಯಿಂದ ಹೊರ ಬಂದು ಕೆಲಸಕ್ಕೆ ಹೋಗುತ್ತಿದ್ದ. ಸ್ವಲ್ಪ ದೂರ ನಡೆದ ನಂತರ.. ಒಂದು ನಾಯಿ ಅವರನ್ನ ಕಚ್ಚಲು ಬಂದಿತು. ಇದರಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಮಹೇಶ್ ನಾಯಿಗೆ ಕಲ್ಲು ತೆಗೆದುಕೊಂಡು ಹೊಡೆದಿದ್ದಾನೆ. ಆ ಕಲ್ಲು ಗುರಿ ತಪ್ಪಿ ಮನೆಯೊಂದರ ಒಳಗೆ ಹೋಗಿದೆ.
ಆ ಕಲ್ಲು ಬೇರೆಯವರ ಮನೆಗೆ ಬಿದ್ದಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲವೇನೋ.. ಆದರೆ ನಾಯಿಗೆ ಎಸೆದ ಕಲ್ಲು ಮಹೇಶನ ಶತ್ರುವಿನ ಮನೆಯೊಳಗೆ ಬಿದ್ದು ಬಿಟ್ಟಿದೆ. ಇದೇ ದೊಡ್ಡ ಹೊಡೆದಾಟಕ್ಕೆ ನಾಂದಿ ಹಾಡಿದೆ. ಮಹೇಶ ಎಸೆದ ಕಲ್ಲು ಇವರ ಮನೆಯ ಸಮೀಪದ ವೆಂಕಟರಾಮಯ್ಯ ಎಂಬುವವರ ಮನೆ ಮೇಲೆ ಬಿದ್ದಿದೆ. ಹೇಳಿ ಕೇಳಿ, ಈ ಎರಡು ಕುಟುಂಬಗಳ ನಡುವೆ ಹತ್ತು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದೀಗ ನಾಯಿಗೆ ಎಸೆದ ಕಲ್ಲು.. ಮತ್ತೊಮ್ಮೆ ಆ ವಿವಾದ ಹಾಗೂ ವೈಷಮ್ಯ ಮುನ್ನೆಲೆಗೆ ಬರುವಂತೆ.