ಪುಣೆ(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್ ದಾಳಿಗೆ ಮಹಾರಾಷ್ಟ್ರ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ನಿತ್ಯ ಸಾವಿರಾರು ಪ್ರಕರಣ ಹಾಗೂ ನೂರಾರು ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರ ಮಧ್ಯೆ ವೈದ್ಯರು ಹಗಲು - ರಾತ್ರಿ ಲೆಕ್ಕ ಹಾಕದೇ ಸೋಂಕಿತರ ಸೇವೆ ಮಾಡುತ್ತಿದ್ದಾರೆ.
ಡೆಡ್ಲಿ ವೈರಸ್ ಕೊರೊನಾದಿಂದ ವೈದ್ಯ ಡಾ. ಮುಕುಂದ್ ಅವರ ತಂದೆ ಸಾವನ್ನಪ್ಪಿದ್ದು, ಸೋಂಕು ತಗುಲಿರುವ ಕಾರಣ ಅವರ ತಾಯಿ ಹಾಗೂ ಸಹೋದರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟಾದರೂ ಡಾ. ಮುಕುಂದ್ ಮಾತ್ರ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುತ್ತಿದ್ದಾರೆ.
ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯ ಮಗ್ನ ಮಹಾರಾಷ್ಟ್ರದ ಪುಣೆಯಲ್ಲಿರುವ ಸಂಜೀವನ್ ಆಸ್ಪತ್ರೆಯಲ್ಲಿ ಡೈರೆಕ್ಟರ್ ಆಗಿರುವ ಡಾ. ಮುಕುಂದ್ ರೋಗಿಗಳ ಸೇವೆ ಮಾಡುತ್ತಿದ್ದು, ಮನೆಯಲ್ಲಿನ ಸ್ಥಿತಿ ಗಂಭೀರವಾಗಿದ್ದರೂ, ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ರೋಗಿಗಳ ಸೇವೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಂಗಾಳ ಜನರ ಕಲ್ಯಾಣಕ್ಕಾಗಿ ಬಿಜೆಪಿ ಕೆಲಸ ಮಾಡಲಿದೆ, ಆದ್ರೆ ಟಿಎಂಸಿ ಶಿಸ್ತು ಬದ್ಧವಾಗಿರಲಿ: ವಿಜಯ ವರ್ಗೀಯಾ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಾ.ಮುಕುಂದ್, ಸದ್ಯದ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಇಂತಹ ಸ್ಥಿತಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.