ನವೀ ಮುಂಬೈ:ನವಜಾತ ಶಿಶುವನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಓರ್ವ ವೈದ್ಯ ಹಾಗೂ ಮೂವರು ಮಹಿಳೆಯರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರು ನವೀ ಮುಂಬೈನ ತಲೊಜಾ ಮೂಲದವರಾಗಿದ್ದು, ವೈದ್ಯ ಕಾಮೋಥಾದಲ್ಲಿ ಸ್ವಂತ ಕ್ಲಿನಿಕ್ ಹೊಂದಿದ್ದನು ಎಂದು ತಿಳಿದುಬಂದಿದೆ.
ಪಂಕಜ್ ಪಟೇಲ್ ಬಂಧಿತ ವೈದ್ಯನಾಗಿದ್ದು, ಕಾಮೋಥೆ ಸೆಕ್ಟರ್ 8ರಲ್ಲಿ ಕ್ಲಿನಿಕ್ ನಡೆಸುತ್ತಿದ್ದನು. ಮಗುವನ್ನು ಈ ಕ್ಲಿನಿಕ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ, ವೈದ್ಯ ಹಾಗೂ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.