ಏಷ್ಯಾ-ಪೆಸಿಫಿಕ್ ಪ್ರದೇಶದ ಹೊಸ ವಿಶ್ಲೇಷಣೆಯು ಕೊರೊನಾ ಸಾಂಕ್ರಾಮಿಕದ ಮಧ್ಯೆ ಡಿಜಿಟಲ್ ಮೀಡಿಯಾ ದುರ್ಬಳಕೆ ಮತ್ತು ಮಹಿಳೆಯರ ಮೇಲಿನ ಕಿರುಕುಳದ ಬಗ್ಗೆ ಬೆಳಕು ಹಾಯಿಸಿದೆ. ಈ ಸಂಶೋಧನೆಗಳು ಜಾಗತಿಕ ಬಿಕ್ಕಟ್ಟಿನ ಮಧ್ಯೆ ಮಹಿಳೆಯರ ಸುರಕ್ಷತೆ ಮತ್ತು ಕಲ್ಯಾಣದ ಬಗ್ಗೆ ದೀರ್ಘಕಾಲದ ಕಾಳಜಿಯನ್ನು ತೋರಿಸುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಲಾಕ್‌ಡೌನ್ ಸಮಯದಲ್ಲಿ ನೆರವು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡು ಹಿಡಿದಿದೆ.
ಈ ಹೊಸ ವಿಶ್ಲೇಷಣೆಯನ್ನು ಯುಎನ್ ವುಮೆನ್, ಯುಎನ್‌ಎಫ್‌ಪಿಎ ಮತ್ತು ವಿಶ್ಲೇಷಣಾ ಕಂಪನಿ ಕ್ವಿಲ್ಟ್ ಬಿಡುಗಡೆ ಮಾಡಿದೆ. ಎಐ - ಮಹಿಳೆಯರು ತಮ್ಮ ಸುರಕ್ಷತೆಗಾಗಿ ಎಷ್ಟು ವ್ಯಾಪಕವಾಗಿ ಭಯಪಡುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.
ಅಧ್ಯಯನವು ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥಾಯ್ಲೆಂಡ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್ ವಿಷಯದ ಜೊತೆಗೆ ಇಂಟರ್ನೆಟ್ ಹುಡುಕಾಟ ಡೇಟಾವನ್ನು ಅಧ್ಯಯನ ಮಾಡಿದೆ. ಈ ವಿಶ್ಲೇಷಣೆಯು ಸೆಪ್ಟೆಂಬರ್ 2019 ರಿಂದ ನವೆಂಬರ್ 2020 ರವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಸುಮಾರು 20.5 ಮಿಲಿಯನ್ ಅನನ್ಯ ಹುಡುಕಾಟಗಳು, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ 3,500 ಕೀವರ್ಡ್ಗಳು ಮತ್ತು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಶೇರ್‌ಚಾಟ್‌ನಲ್ಲಿ 2,000 ಪೋಸ್ಟ್‌ಗಳನ್ನು ಒಳಗೊಂಡಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದ ಹುಡುಕಾಟಗಳು ದೈಹಿಕ ಕಿರುಕುಳ ಚಿಹ್ನೆಗಳು, ಹಿಂಸಾತ್ಮಕ ಸಂಬಂಧದಂತಹ ಮುಂತಾದ ವಿಚಾರಗಳನ್ನು ಒಳಗೊಂಡಿವೆ. ಮಲೇಷ್ಯಾದಲ್ಲಿ ಶೇಕಡಾ 47, ಫಿಲಿಪೈನ್ಸ್‌ನಲ್ಲಿ 63 ಮತ್ತು ನೇಪಾಳದಲ್ಲಿ 55 ಪ್ರತಿಶತದಷ್ಟು ದೌರ್ಜನ್ಯ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೊದಲು ಮತ್ತು ಸೆಪ್ಟೆಂಬರ್ 2020ರ ಸಮಯದಲ್ಲಿ ಹಿಂಸಾತ್ಮಕ ಪತಿ ಅಥವಾ ಹಿಂಸಾತ್ಮಕ ಪಾಲುದಾರ ಎಂಬ ಕುರಿತ ಪ್ರಶ್ನೆಗಳು ಹೆಚ್ಚಿನ ಹುಡುಕಾಟಕ್ಕೊಳಗಾಗಿವೆ.