ಸಿಗರೇಟ್ ಸೇದಿ ಮೂಗು ಬಾಯಿಯಲ್ಲಿ ವಿವಿಧ ಶೈಲಿಯಲ್ಲಿ ಹೊಗೆಯುಗುಳಿದರೆ ಅದೊಂದು ಸ್ಟ್ಯಾಂಡರ್ಡ್ ಎಂದು ಭಾವಿಸುವ ಯುವ ಜಗತ್ತು ಇಂದಿನದು. ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ, ಅದು ನಮ್ಮನ್ನು ಧೂಮಪಾನಕ್ಕೆ ದಾಸರನ್ನಾಗಿ ಮಾಡುತ್ತದೆ. ಆ ಚಟದಿಂದ ಹೊರಬರಲು ನಮ್ಮ ಇಂದಿನ ಅತ್ಯಾಧುನಿಕ ಅಜಗತ್ತು ಇಲಿಕ್ಟ್ರಾನಿಕ್ ಸಿಗರೆಟ್ ಎಂಬ ತಂತ್ರಜ್ಞಾನವೊಂದನ್ನು ಕಂಡುಹಿಡಿದು ಮರ್ಕಟ ಬುದ್ಧಿಯ ಮನುಷ್ಯನ ಕೈಯಲ್ಲಿಟ್ಟಿದೆ. ಅದೇ ಇ-ಸಿಗರೇಟ್- ವ್ಯಾಪಿಂಗ್ ಇಂದು ಯುವಕರ ಫ್ಯಾಷನ್ ಆಗಿ ಮಾರ್ಪಟ್ಟು ಆಗಿದೆ.
ಈ ಇ-ಸಿಗರೇಟ್ ಬಳಕೆಯಿಂದಾಗುವ ಪರಿಣಾಮಗಳ ಕುರಿತು, ಯಾರನ್ನು ಹೆಚ್ಚು ಈ ಇ-ಸಿಗರೇಟ್ ಆಕ್ರಿಮಿಸಿಕೊಂಡಿದೆ, ಯಾರೆಲ್ಲ ಇದರ ದಾಸರಾಗಿದ್ದಾರೆ ಎನ್ನುವ ಕುರಿತು ಆಸ್ಟ್ರೇಲಿಯಾದ ಯೂನಿವರ್ಸಿಟಿಯೊಂದು ಸಂಶೋಧನೆಯನ್ನು ಕೈಗೊಂಡಿದೆ. ಈ ವರದಿಯನ್ನು ಗಮನಿಸಿರುವ ಸಾರ್ವಜನಿಕ ಆರೋಗ್ಯ ವಕೀಲರು ಶಾಲಾ ಮಕ್ಕಳಲ್ಲಿ ಇ-ಸಿಗರೇಟ್ ಬಳಕೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಯುವಕರಲ್ಲಿ ಧೂಮಪಾನದ ದರ ಹೆಚ್ಚಾಗಿದ್ದು, ವ್ಯಾಪಿಂಗ್ ಎಲ್ಲಾ ವಯಸ್ಸಿನವರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ಸಂಶೋಧಕರು ಕೈಗೊಂಡ ಸಂಶೋಧನೆಯೊಂದನ್ನು ಫೆಡರಲ್ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅದರ ಪ್ರಕಾರ ಇ-ಸಿಗರೇಟ್‌ಗಳಿಂದ ಆರೋಗ್ಯದಲ್ಲಾಗುವ ಅಪಾಯಗಳ ಪ್ರಮಾಣ ಗನನೀಯವಾಗಿ ಹೆಚ್ಚಾಗಿದೆ. ಇ-ಸಿಗರೇಟ್ ಮಾರಾಟವನ್ನು ಉತ್ತೇಜಿಸಲು ಈ ಡೇಟಾವನ್ನು ಬಳಸುವ ಲಾಬಿಯಿಸ್ಟ್ ಕೂಡ ಈ ವಿಮರ್ಶೆಯನ್ನು ಕಂಡು ದಂಗಾಗಿದ್ದಾರೆ. ಇದಕ್ಕಿಂತ ಹಿಂದಿನ ಯಾವುದೇ ಸಂಶೋಧನೆಗಳಲ್ಲಿ ಈ ರೀತಿಯ ವರದಿ ಕಂಡುಬಂದಿರಲಿಲ್ಲ ಎಂಬುದಾಗಿ ಆರೋಗ್ಯ ತಜ್ಞರು ಹೇಳುತ್ತಾರೆ.
ವಿಮರ್ಶೆಯಲ್ಲೇನಿದೆ?..ಇ-ಸಿಗರೇಟ್‌ಗಳು ಅಥವಾ ಇನ್ಹಲೇಷನ್‌ಗಾಗಿ ದ್ರವವನ್ನು ಏರೋಸೋಲೈಸ್ ಮಾಡುವ ವೈವಿಧ್ಯಮಯ ಸಾಧನಗಳ ವೇಪ್‌ಗಳು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಹಿಂದಿನ ಪುರಾವೆಗಳನ್ನು ವಿಮರ್ಶೆ ಪರಿಗಣಿಸಿದೆ. ಇವುಗಳನ್ನು ಸಿಗರೇಟ್ಗಳಿಗೆ ಸುರಕ್ಷಿತ ಪರ್ಯಾಯ ಮತ್ತು ಧೂಮಪಾನ ಬಿಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಿಮರ್ಶೆ, ಇ-ಸಿಗರೇಟ್ನಿಂದ ತೀವ್ರವಾದ ಶ್ವಾಸಕೋಶದ ಕಾಯಿಲೆ, ವಿಷಾಕಾರಕ, ಶ್ವಾಸಕೋಶವನ್ನು ಸುಟ್ಟುಹಾಕುತ್ತದೆ, ಇದು ವ್ಯಸನವಾಗಿಯೂ ಮನುಷ್ಯನನ್ನು ಕಾಡುತ್ತದೆ ಎಂಬುದನ್ನು ಕಂಡುಕೊಂಡಿದೆ. ಅದಲ್ಲದೆ ಇವುಗಳು ಗಂಟಲಿನ ಕಿರಿ ಕಿರಿ ಮತ್ತು ವಾಕರಿಕೆಗಳಂತಹ ಗಂಭೀರವಲ್ಲದ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.
ಸೇದುವವರಲ್ಲಿ ಮಾತ್ರವಲ್ಲದೆ, ಸೇದದೆ ಹತ್ತಿರ ನಿಲ್ಲುವವರಲ್ಲೂ ಇ- ಸಿಗರೇಟ್‌ಗಳು ದೇಹದೊಳಗೆ ಏರ್ಬೋರ್ನ್ ಕಣಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಪುರಾವೆ ವಿಮರ್ಶೆಯಿಂದ ದೊರೆತಿದೆ. ಎಂದಿಗೂ ಇ- ಸಿಗರೇಟ್ ಬಳಸದೇ ಇರುವವರ ಜೊತೆ ಹೋಲಿಸಿದರೆ ಇದುವರೆಗೆ ಧೂಮಪಾನ ಮಾಡದ ಅಥವಾ ಧೂಮಪಾನ ಮಾಡದ ಜನರು ಇ-ಸಿಗರೇಟ್ಗಳನ್ನು ಸೇದಿದರೆ ಅಂತಹವರು ಧೂಮಪಾನ ದಾಸರಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಇ-ಸಿಗರೆಟ್ನಿಂದಾಗುವ ಹಾನಿ, ಪ್ರಯೋಜನಗಳೇನು:ಇ-ಸಿಗರೆಟ್ಗಳು ಧೂಮಪಾನ ಚಟದಿಂದ ದೂರವಾಗಲು ಸಹಾಯ ಮಾಡುತ್ತದೆ ಎಂಬುದಕ್ಕೂ ಕೆಲವೊಂದು ಪುರಾವೆಗಳನ್ನು ವಿಮರ್ಶೆ ಕಂಡುಹಿಡಿದಿದೆ. ಆದರೆ ಇ- ಸಿಗರೇಟ್ ಬಳಸುವುದರಿಂದ ಮತ್ತೆ ಧೂಮಪಾನ ಚಟವನ್ನು ಮುಂದುವರಿಸುತ್ತಾರೆ ಎನ್ನುವುದನ್ನೇ ಸಿಕ್ಕ ಪುರಾವೆಗಳಿಗಿಂತ ಅವುಗಳೇನು ಪ್ರಬಲವಾಗಿರಲಿಲ್ಲ. ಇ-ಸಿಗರೇಟ್ನಿಂದ ಪ್ರಯೋಜನಗಳಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ. ಇ-ಸಿಗರೇಟ್ ಕೆಲವೊಬ್ಬರಿಗೆ ಧೂಮಪಾನ ಬಿಡಲು ಸಹಾಯ ಮಾಡಿರಬಹುದು. ಹಾಗಿದ್ದಲ್ಲಿ ಜನರಿಗೆ ಧೂಮಪಾನ ತೊರೆಯುವಂತೆ ಮಾಡಲು, ಇ-ಸಿಗರೇಟ್‌ಗಳು ತರಬೇತಿ ಪಡೆದ ಅಧಿಕೃತ ವೈದ್ಯಕೀಯ ವೃತ್ತಿಪರರ ಪ್ರಿಸ್ಕ್ರಿಪ್ಷನ್ ಮೂಲಕ ಮಾತ್ರ ದೊರೆಯುವಂತೆ ಮಾಡುವುದು ಉತ್ತಮ.
ಯುವಕರಲ್ಲೂ ಹೆಚ್ಚಾಗಿದೆ ವ್ಯಾಪಿಂಗ್:ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ವೆಲ್ಫೇರ್ನ ಡೇಟಾ, 18-24 ವರ್ಷ ವಯಸ್ಸಿನ ಯುವಕರು ಹೆಚ್ಚು ಇ- ಸಿಗರೇಟ್ ಬಬಳಸುತ್ತಾರೆ ಎಂಬುದನ್ನು ಹೇಳುತ್ತದೆ. ಈ ಲೆಕ್ಕಾಚಾರ 2016 19.2% ಇದ್ದ ಪ್ರಮಾಣ 2019ರಲ್ಲಿ 26.1%ಕ್ಕೆ ಏರಿಕೆಯಾಗಿದೆ. ಧೂಮಪಾನಿಗಳೆಂದು ಗುರುತಿಸುವ ಇ-ಸಿಗರೇಟ್ ಬಳಕೆದಾರರಲ್ಲಿ, ಎರಡನೇ ಅತಿದೊಡ್ಡ ಬಳಕೆದಾರರ ಗುಂಪು 14 ರಿಂದ 17 ವರ್ಷ ವಯಸ್ಸಿನವರು. ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ವೆಲ್ಫೇರ್ನ ಡೇಟಾ ಆಸ್ಟ್ರೇಲಿಯನ್ ಶಾಲೆಯಯಲ್ಲಿ ಕಾಣಿಸಿಕೊಂಡ ಇ-ಸಿಗರೇಟ್ ಬಳಕೆದಾರರನ್ನು ಒಳಗೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವಯಸ್ಸು ಮತ್ತು ಲಿಂಗದ ಆಧಾರದಲ್ಲಿ ಗಮನಿಸುವುದಾದರೂ ಇ-ಸಿಗರೇಟ್ ಬಳಸುವವರಲ್ಲಿ ಯುವ ಪುರುಷರು ಮೊದಲ ಸ್ಥಾನದಲ್ಲಿದ್ದಾರೆ.
ಲಭ್ಯತೆಯನ್ನು ಕಡಿಮೆಗೊಳಿಸಬೇಕು:ಇ- ಸಿಗರೇಟ್‌ಗಳು ಯಾವುದೇ ಪ್ರಯೋಜನಗಳಾಗಬಹುದು, ಉದಾಹರಣೆಗೆ ಧೂಮಪಾನ ಚಟ ಬಿಡಲು ಸಹಾಯ ಮಾಡಬಹುದು, ಆದರೆ ಅವುಗಳು ಮಾಡುವ ಹಾನಿ ಮಾತ್ರ ದೊಡ್ಡದು. ದುರಾದೃಷ್ಟವಶಾತ್ ಪ್ರಬಲವಾದ ವ್ಯಾಪಾರಿಕರಣದ ಹಿತಾಸಕ್ತಿಗಳಿಂದ ಇ-ಸಿಗರೇಟ್ಗಳ ನಿಯಂತ್ರಣದ ಮೇಲಿನ ಸಾರ್ವಜನಿಕ ನೀತಿಯು ಕ್ಷೀಣವಾಗಿದೆ. ಸಾರ್ವಜನಿಕ ಹಿತಾಸಕ್ತಿಗಾದರೂ ನಾವು ಅವುಗಳ ವಿರುದ್ಧ ಹೋರಾಡಬೇಕಿದೆ.
ಸರ್ಕಾರಗಳ ಪಾತ್ರ ಏನು?ಕೆಲವು ಫೆಡರಲ್, ರಾಜ್ಯ ಮತ್ತು ಪ್ರಾಂತ್ಯ ಸರ್ಕಾರಗಳು ಇ-ಸಿಗರೇಟ್ ಒದಗಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ಜಾರಿಗೆ ತಂದಿವೆ. ಆ ನೀತಿಯ ಪ್ರಕಾರ ಅವರು ಧೂಮಪಾನ ತೊರೆಯುವ ಉದ್ದೇಶದಿಂದ ಬಳಸುವವರಿಗೆ ಮಾತ್ರ ಇ- ಸಿಗರೇಟ್ ಒದಗಿಸುತ್ತಾರೆ. ಎಲ್ಲರಿಗೂ ನೀಡದೆ ಉಳಿದವರ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಆ ನೀತಿಗಳು ಮಾಡುತ್ತಿವೆ. ಆನ್ಲೈನ್ನಲ್ಲಿ ಇ-ಸಿಗರೇಟ್ಗಳನ್ನು ಸುಲಭವಾಗಿ ಖರೀದಿಸಬಹುದು. ಯಾವುದೇ ಪ್ರಿಸ್ಕ್ರಿಪ್ಷನ್ಗಳಿಲ್ಲದೆಯೇ ಪೆಟ್ರೋಲ್ ಸ್ಟೇಷನ್ಗಳು, ತಂಬಾಕು ವ್ಯಾಪಾರಿಗಳು, ವಿಶೇಷ ವೇಪ್ ಸ್ಟೋರ್‌ಗಳು ಕಾನೂಬಾಹಿರವಾಗಿ ಮಾರಾಟ ಮಾಡುತ್ತದೆ. ಇಂತಹ ವ್ಯಾಪಾರಿಗಳಿಗೆ ಭಾರಿ ದಂಡವನ್ನು ಹಾಕುವ ಮೂಲಕ ಕಾನೂನುಬಾಹಿರ ವ್ಯಾಪಾರಕ್ಕೆ ತಡೆ ಹಾಕುವುದು ಉತ್ತಮ.
ಇದನ್ನೂ ಓದಿ:ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆಗಳು...
ಸರ್ಕಾರಗಳು ತಮ್ಮ ಕಾನೂನುಗಳನ್ನು ಜಾರಿಗೊಳಿಸದ ಹೊರತು ಇ-ಸಿಗರೇಟ್‌ಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಗಳು ಹೆಚ್ಚಾಗುತ್ತವೆ. ಇ ಮೂಲಕವೇ ಆಸ್ಟ್ರೇಲಿಯಾದ ಯುವ ಪೀಳಿಗೆಯನ್ನು ಮುಂದೊಂದು ದಿನ ದೊಡ್ಡ ಮಟ್ಟದ ಹಣ ಕೊಟ್ಟು ನಿಕೊಟಿನ್ ಖರೀದಿಸದಂತೆ, ಕೆಟ್ಟ ಪದಾರ್ಥಗಳ ದಾಸರಾಗದಂತೆ ತಡೆಯಲು ಸಾಧ್ಯ. ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸುವ ಅಗತ್ಯತೆ ಇದೆ.