ಕರ್ನಾಟಕ

karnataka

ETV Bharat / bharat

ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: 3 ದಿನಗಳ ಬಳಿಕ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆ - Andhra Pradesh

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಾಮೇರು ಸಮೀಪದ ಗ್ರಾಮದ 14 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೂರು ದಿನಗಳ ನಂತರ ಕಾಲುವೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದೆ.

Dalit girl gang rape
ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: 3 ದಿನಗಳ ಬಳಿಕ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆ

By

Published : Jul 24, 2023, 6:43 PM IST

ಅಮರಾವತಿ (ಆಂಧ್ರಪ್ರದೇಶ):ಪ್ರೀತಿಯ ಹೆಸರಲ್ಲಿ ದಲಿತ ಬಾಲಕಿಗೆ ಬಲೆ ಬೀಸಿದ ಪ್ರೇಮಿಯೊಬ್ಬ ಲಾಡ್ಜ್‌ಗೆ ಕರೆದೊಯ್ದು ಮತ್ತೊಬ್ಬನ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯ ನಂತರ ಬಳಿಕ ಬಾಲಕಿ ಶವ ಕಾಲುವೆಯಲ್ಲಿ ಪತ್ತೆಯಾಗಿದೆ.

ಶಾಲೆಯೊಂದರಲ್ಲಿ ಬಾಲಕಿ(14) ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಹುಡುಗಿ ಇದ್ದ ಬೀದಿಗೆ ಬರುತ್ತಿದ್ದ ಲೋಕೇಶ್ ಎಂಬಾತ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದ. ಇದೇ ತಿಂಗಳ 20ರಂದು ಬಾಲಕಿಗೆ ಕರೆ ಮಾಡಿ, ತನ್ನೊಂದಿಗೆ ಒಂಟಿಯಾಗಿ ಕಾಲ ಕಳೆಯುವಂತೆ ಹೇಳಿದ್ದಾನೆ. ಬಾಲಕಿ ಶಾಲೆಗೆ ಹೋಗುವುದಾಗಿ ಹೇಳಿ, ಲೋಕೇಶ್​ ಜೊತೆಗೆ ಹೊರಗೆ ಹೋಗಿದ್ದಳು. ಬ್ಯಾಗ್​​ ಅನ್ನು ಶಾಲೆಯ ಹೊರಗೆ ಬಿಟ್ಟು ಹೋಗಿದ್ದಳು. ಯುವಕನೊಬ್ಬನಿಗೆ ಲಿಫ್ಟ್​ ಕೇಳಿ, ವಿಜಯವಾಡ - ಮಚಲಿಪಟ್ಟಣಂ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸೇತುವೆಯ ಬಳಿ ಬಂದು ಇಳಿದಿದ್ದಾಳೆ. ಸ್ವಲ್ಪ ಸಮಯದ ಬಳಿಕ, ಲೋಕೇಶ್ ಬಂದು ಆಕೆಯನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದನು.

ಲಾಡ್ಜ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ:ಲೋಕೇಶ್​, ಬಾಲಕಿಯನ್ನು ಉಯ್ಯೂರಿನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಸೋದರ ಸಂಬಂಧಿ ನರೇಂದ್ರನನ್ನು ಕರೆದಿದ್ದಾನೆ. ಈ ಇಬ್ಬರು ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಶಾಲೆಯ ಹೊರಗಿದ್ದ ಬ್ಯಾಗ್ ನೋಡಿದ ಕಾವಲುಗಾರ, ಹೆಡ್​​ಮಾಸ್ಟರ್​​ಗೆ ಈ ಬಗ್ಗೆ ತಿಳಿಸಿದ್ದಾನೆ. ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಆತಂಕದಿಂದ ಶಾಲೆಗೆ ಬಂದ ತಾಯಿಗೆ ಬಾಲಕಿ ಶಾಲೆಗೆ ಬಂದಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.

ಹುಡುಗಿ ಶಾಲೆಯಿಂದ ಮನೆಗೆ ವಾಪಸ್​ ಆಗುತ್ತಿದ್ದಾಳೆ ಎಂದು ತಿಳಿದು, ದಾರಿಯಲ್ಲಿ ಹೋಗುತ್ತಿದ್ದ ಯುವಕನೊಬ್ಬ ಬಾಲಕಿಗೆ ಲಿಫ್ಟ್ ನೀಡಿದ್ದ. ಆಕೆಯನ್ನು ಬ್ರಿಡ್ಜ್ ಮೇಲೆ ಇಳಿಸಿ ಹೋಗಿದ್ದಾನೆ. ನಂತರ ಸೇತುವೆ ಬಳಿ ಬಂದ ಲೋಕೇಶ್, ಹುಡುಗಿಯನ್ನು ತನ್ನ ವಾಹನದಲ್ಲಿ ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದಾನೆ. ಎಲ್ಲೆಡೆ ಹುಡುಕಾಟ ನಡೆಸಿದ ಬಾಲಕಿಯ ಪೋಷಕರು, ಲೋಕೇಶ್​ಗೆ ಕರೆ ಮಾಡಿದ್ದಾರೆ. ಈ ವೇಳೆ, ಲಾಡ್ಜ್‌ನಲ್ಲಿದ್ದ ಆತ ಗೊಂದಲಕ್ಕೀಡಾಗಿ ಬಾಲಕಿಯನ್ನು ಮನೆ ಬಳಿ ಡ್ರಾಪ್ ಮಾಡಿದ್ದಾನೆ. ರಾತ್ರಿಯಾದರೂ ಬಾಲಕಿ ಮನೆಗೆ ಬಾರದೇ ಇದ್ದಾಗ ಪೋಷಕರು ಪಾಮೇರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಿನ್ನತೆಯಿಂದ ಆತ್ಮಹತ್ಯೆ?:ಲೋಕೇಶ್ ಮತ್ತು ನರೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಾಲಕಿಯನ್ನು ಆಕೆಯ ಮನೆ ಬಳಿ ಬಿಟ್ಟು ಹೋಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ನಡುವೆ ಭಾನುವಾರ ರಾತ್ರಿ ಮೊವ್ವ ಮಂಡಲದ ಸೂರಸಾನಿಪಲ್ಲಿಯ ಕಾಲುವೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆಕೆ ಖಿನ್ನತೆಯಿಂದ ಕಾಲುವೆಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಆತ್ಮಹತ್ಯೆಗೆ ಪ್ರಚೋದನೆ, ಎಸ್‌ಸಿ ಮತ್ತು ಎಸ್‌ಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ:ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ; ರಾಜಸ್ಥಾನದಲ್ಲಿ ಸಂಚಲನ

ABOUT THE AUTHOR

...view details