ಕರ್ನಾಟಕ

karnataka

ETV Bharat / bharat

ಮುಂಬೈನ ಗ್ರೇಸ್ ಕುಟುಂಬದ ವಿಶೇಷ ಅತಿಥಿ.. ಈತ ಈ ಮನೆಗೆ ಬಂದ ಹಿಂದಿನ ಕತೆ ಬಲುರೋಚಕ! - ಕುಟುಂಬ ಸದಸ್ಯನಾದ ಕಾಗೆ

ಅಂದು ಗಾಯಗೊಂಡು ಬಾಲ್ಕನಿಗೆ ಬಂದಿದ್ದ ಅದೇ ಕಾಗೆ ಈಗ ಗ್ರೇಸ್​ ಕುಟುಂಬದ ನೆಚ್ಚಿನ ಪುಟ್ಟ ಸದಸ್ಯನಾಗಿದ್ದಾನೆ. ಕುಕೂ ಆಗಮನದಿಂದ ಗ್ರೇಸ್ ಕುಟುಂಬದ ವಿಶೇಷ ಸದಸ್ಯನಾಗಿದ್ದಾನೆ..

A crow became member of a Family
ಮುಂಬೈನ ಗ್ರೇಸ್ ಕುಟುಂಬದ ವಿಶೇಷ ಅತಿಥಿ

By

Published : Apr 5, 2021, 6:05 AM IST

ಮುಂಬೈ (ಮಹಾರಾಷ್ಟ್ರ):ಇದು ಮುಂಬೈನ ಗ್ರೇಸ್ ಕುಟುಂಬ. ಈ ಕುಟುಂಬದಲ್ಲಿ ಓರ್ವ ಪುಟ್ಟ ಸದಸ್ಯನಿದ್ದಾನೆ. ಈತ ಅತಿಥಿಯಾಗಿ ಬಂದು ಈಗ ಸದಸ್ಯನಾದವನು. ಆತನ ಹೆಸರು ಕುಕೂ.. ಈತ ಈ ಮನೆಗೆ ಬಂದ ಹಿಂದಿನ ಕತೆ ಬಲುರೋಚಕವಾಗಿದೆ.

ಮುಂಬೈನ ಗ್ರೇಸ್ ಕುಟುಂಬದ ವಿಶೇಷ ಅತಿಥಿ

ಅಂದು ಗಾಯಗೊಂಡು ಬಾಲ್ಕನಿಗೆ ಬಂದಿದ್ದ ಅದೇ ಕಾಗೆ ಈಗ ಗ್ರೇಸ್​ ಕುಟುಂಬದ ನೆಚ್ಚಿನ ಪುಟ್ಟ ಸದಸ್ಯನಾಗಿದ್ದಾನೆ. ಕಾಗೆ ಮತ್ತು ಈ ಕುಟುಂಬದ ನಡುವಿನ ಬಾಂಧವ್ಯ ಎಲ್ಲರ ಗಮನ ಸೆಳೆಯುತ್ತಿದೆ. ಗ್ರೇಸ್‌ ಕುಟುಂಬ ಸದಸ್ಯರು ಸಹ ಕಾಗೆಯನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಈ ಕಾಗೆಗೆ ಕುಕೂ ಎಂದು ನಾಮಕರಣ ಸಹ ಮಾಡಿದ್ದಾರೆ. ಆತನನ್ನು ತಮ್ಮ ಮನೆಯವನಂತೆಯೇ ನೋಡಿಕೊಳ್ಳಿತ್ತಿದ್ದಾರೆ.

ಕುಕೂ ಈ ಕುಟುಂಬದ ಚಿಕ್ಕ ಮಗುವಿನಂತಾಗಿದ್ದಾನೆ. ಎಲ್ಲಾ ಗ್ರೇಸ್ ಕುಟುಂಬ ಸದಸ್ಯರು ಕುಕೂಗೆ ವಿಶೇಷ ಗಮನ ನೀಡುತ್ತಾರೆ. ಕುಕೂ ಆಗಮನದಿಂದ ಗ್ರೇಸ್ ಕುಟುಂಬದ ವಿಶೇಷ ಸದಸ್ಯನಾಗಿದ್ದಾನೆ. ಗ್ರೇಸ್ ಕುಟುಂಬವು ಕಾಗೆಗೆ ತೋರಿಸಿದ ಬಾಂಧವ್ಯ ಮತ್ತು ಪ್ರೀತಿ ಸಮಾಜಕ್ಕೆ ಉತ್ತಮ ಮಾನವೀಯ ಉದಾಹರಣೆಯಾಗಿದೆ.

ABOUT THE AUTHOR

...view details