ಶಿವಪುರಿ (ಮಧ್ಯಪ್ರದೇಶ): ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ರೋಗಿಯ ಆಮ್ಲಜನಕ ಸಂಪರ್ಕವನ್ನು ವಾರ್ಡ್ ಬಾಯ್ ಕಡಿತಗೊಳಿಸಿದ್ದು, ಪರಿಣಾಮ ಸೋಂಕಿತ ಮೃತಪಟ್ಟಿದ್ದಾನೆ.
ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ವಾರ್ಡ್ ಬಾಯ್: ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು - ವಾರ್ಡ್ ಬಾಯ್
ಕೋವಿಡ್ ರೋಗಿಯ ಆಮ್ಲಜನಕ ಸಂಪರ್ಕವನ್ನು ವಾರ್ಡ್ ಬಾಯ್ ಕಡಿತಗೊಳಿಸಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲಾಸ್ಪತ್ರೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ವಾರ್ಡ್ ಬಾಯ್ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೋಗಿಗೆ ಉಸಿರಾಡಲು ಸಂಪರ್ಕಿಸಿದ್ದ ಆಮ್ಲಜನಕ ಪೂರೈಸುವ ಯಂತ್ರವನ್ನು ವಾರ್ಡ್ ಬಾಯ್ ತೆಗೆದುಕೊಂಡು ಹೋಗುವ ದೃಶ್ಯವನ್ನು ಸಿಸಿಟಿವಿ ವಿಡಿಯೋದಲ್ಲಿ ಕಾಣಬಹುದಾಗಿದೆ.
ರೋಗಿಯು ಸಕ್ಕರೆ ಕಾಯಿಲೆಯಿಂದ ಕೂಡ ಬಳಲುತ್ತಿದ್ದು, ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿದೆ. ತಕ್ಷಣವೇ ಉಸಿರಾಟದ ಸಮಸ್ಯೆ ಎದುರಾಗಿದ್ದು, ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಾಗೂ ಮೃತನ ಕುಟುಂಬಸ್ಥರ ಆರೋಪದ ಮೇರೆಗೆ ತನಿಖೆ ನಡೆಸುತ್ತಿರುವುದಾಗಿ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.