ಹೈದರಾಬಾದ್(ತೆಲಂಗಾಣ):ಮನೆ ಮುಂದೆ ಟು - ಲೆಟ್ ಬೋರ್ಡ್ ಹಾಕಿದ್ರೆ ಪ್ರತಿದಿನ ಐದಾರು ಮಂದಿ ಬಂದು ರೂಂ ನೋಡುವುದು ಸರ್ವೆ ಸಾಮಾನ್ಯ. ಹೀಗೆ ಬಂದವರಿಗೆಲ್ಲ ಅವರ ಜೊತೆ ಹೋಗಿ, ಮನೆ ತೋರಿಸುವುದು ಸ್ವಲ್ಪ ಕಷ್ಟದ ಕೆಲಸ. ಹೀಗಾಗಿ, ಬೀಗದ ಕೈ ಅವರಿಗೆ ನೀಡಿ, ನೀವೇ ನೋಡ್ಕೋಳ್ಳಿ ಎಂದು ಮಾಲೀಕರು ಹೇಳುತ್ತಾರೆ. ಆದರೆ,ಇಂತಹ ತಪ್ಪು ನೀವೂ ಮಾಡುತ್ತಿದ್ದರೆ ಈ ಸ್ಟೋರಿಯನ್ನೊಮ್ಮೆ ನೋಡಿ.
ಹೈದರಾಬಾದ್ನ ಎಸ್ಆರ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಟು-ಲೆಟ್ ಬೋರ್ಡ್ ಹಾಕಿದ್ದ ಮನೆಗೆ ಬೈಕ್ನಲ್ಲಿ ಬಂದ ಜೋಡಿವೊಂದು ಮನೆಯ ಹೊರಗಡೆ ನಿಂತಿದ್ದ ಮಾಲೀಕನೊಂದಿಗೆ ಮಾತನಾಡಿದ್ದಾರೆ. ಈ ವೇಳೆ, ಅವರು ದಂಪತಿ ಎಂದು ಭಾವಿಸಿರುವ ಮಾಲೀಕ ಎರಡನೇ ಮಹಡಿಯಲ್ಲಿ ಮನೆ ಖಾಲಿ ಇದೆ ಎಂದು ಹೇಳಿ, ಅವರ ಕೈಗೆ ಕೀ ನೀಡಿದ್ದಾನೆ. ಅಲ್ಲಿಗೆ ತೆರಳಿರುವ ಜೋಡಿ, ಸ್ವಲ್ಪ ಸಮಯದ ನಂತರ ಕೆಳಗೆ ಬಂದಿದ್ದು, ಮಾಲೀಕರ ಹತ್ತಿರ ಏನೋ ಹೇಳಿ, ಮತ್ತೆ ಮೇಲೆ ಹೋಗಿದೆ.