ತಂತ್ರಜ್ಞಾನ ಬದಲಾಗುತ್ತಿದೆ. ಅದರ ಬಳಕೆಯೂ ವಿಸ್ತಾರವಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಈಗ ವಿವಾಹವೂ ನಡೆಯುತ್ತಿವೆ. ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯ ಶಿವಲಿಂಗಪುರಂನಲ್ಲಿ ಜೋಡಿಗಳು ಫೆಬ್ರವರಿ 6ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ಅವರು ಬಳಸುತ್ತಿರುವ ತಂತ್ರಜ್ಞಾನ ಮೆಟಾವರ್ಸ್..
ತ್ರೀಡಿ ಮೂಲಕ ಈ ವಿವಾಹ ಸಮಾರಂಭ ನಂತರ ನಡೆಯುವ ಆರತಕ್ಷತೆ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಇರುವ ಸ್ನೇಹಿತರು ಮತ್ತು ಕುಟುಂಬಸ್ಥರು ವೀಕ್ಷಿಸಬಹುದಾಗಿದೆ.
ವಿಡಿಯೋ ಕಾನ್ಫರೆನ್ಸ್ಗಿಂತ ತುಂಬಾ ಭಿನ್ನವಾಗಿದ್ದು, ಆನ್ಲೈನ್ನಲ್ಲೇ ಬೇರೊಬ್ಬರೊಡನೆ ಸಂಭಾಷಣೆಯನ್ನು ನಡೆಸಬಹುದಾಗಿದೆ. ಇದನ್ನೇ ಮೆಟಾವರ್ಸ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ.
ಹ್ಯಾರಿ ಪಾಟರ್ ಕಥೆಗಳಲ್ಲಿರುವಂತೆ ದೊಡ್ಡ ಕಟ್ಟಡಗಳನ್ನು ಡಿಜಿಟಲ್ ಮೂಲಕ ಸೃಷ್ಟಿಸಿ, ಆ ಸ್ಥಳದಲ್ಲಿ ಆರತಕ್ಷತೆ ನಡೆಸಲಾಗುತ್ತದೆ. ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಅಂಡ್ ವಿಝಾರ್ಡ್ರಿ (Hogwarts School of Witchcraft and Wizardry) ಮೆಟಾವರ್ಸ್ ಆರತಕ್ಷತೆಗೆ ಎಲ್ಲಾ ಸಿದ್ಧತೆ ನಡೆಸುತ್ತಿವೆ.
ಭಾವಿ ವರ ದಿನೇಶ್ ಈ ಕುರಿತು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ವಿಡಿಯೋದನ್ನು ಪೋಸ್ಟ್ ಮಾಡಿದ್ದಾರೆ. ಭಾರತದ ಮೊದಲ ಮೆಟಾವರ್ಸ್ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದೇನೆ.
TardiVerse Metaverse ಸ್ಟಾರ್ಟ್‌ಅಪ್‌ನ ಸಹಯೋಗದೊಂದಿಗೆ ಈ ವಿಭಿನ್ನ ವಿವಾಹ ನಡೆಯಲಿದೆ. ಪ್ರಪಂಚದಲ್ಲೇ ಮೊದಲ ಮೆಟಾವರ್ಸ್ ಟೆಕ್ನಾಲಜಿಯ ಸಹಾಯದೊಂದಿಗೆ ವಿವಾಹವಾಗುತ್ತಿರುವುದಕ್ಕೆ ನನಗೆ ಹೆಮ್ಮೆಯೆಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ:ಗಗನಯಾನ್ಗೆ ಸಿದ್ಧತೆ, ಕ್ರಯೋಜನಿಕ್ ಎಂಜಿನ್ ಅರ್ಹತಾ ಪರೀಕ್ಷೆ ಯಶಸ್ವಿ: ಇಸ್ರೋ