ಹೈದರಾಬಾದ್:'ಫೇಸ್ಬುಕ್ ಪ್ರೀತಿ'ಯಿಂದಾಗಿ ಹೈದರಾಬಾದ್ನ ಸಾಫ್ಟವೇರ್ ಇಂಜಿನಿಯರೊಬ್ಬ 1 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ವಿಶೇಷ ಅಂದರೆ ಫೇಸ್ಬುಕ್ ಪ್ರೀತಿ ಹೆಸರಲ್ಲಿ ವಂಚಿಸಿದ್ದು ಹುಡುಗಿಯಲ್ಲ, ಓರ್ವ ದಂಪತಿ..
ಎಂಎನ್ಸಿ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಸಿಕಂದರಾಬಾದ್ ನಿವಾಸಿಯಾದ ವಿಜಯ್(40) ಎಂಬುವರು ವಂಚನೆಗೊಳಗಾದವರು. ಯಾರ್ಲಗಡ್ಡ ದಾಸು ದಂಪತಿ ಮೋಸ ಮಾಡಿದ ಆರೋಪಿಗಳು.
ಅವಿವಾಹಿತರಾಗಿರುವ ವಿಜಯ್ಗೆ 1 ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಕಲ್ಯಾಣಿ ಶ್ರೀ ಎಂಬ ಹೆಸರಲ್ಲಿ ಯಾರ್ಲಗಡ್ಡ ದಾಸು ರಿಕ್ವೆಸ್ಟ್ ಕಳಿಸಿದ್ದಾನೆ. ವಿಜಯ್ ರಿಕ್ವೆಸ್ಟ್ ಅನ್ನು ಸಮ್ಮಿತಿಸಿದ್ದಾರೆ. ಬಳಿಕ ಇಬ್ಬರ ಮಧ್ಯೆ ಪರಸ್ಪರ ಚಾಟಿಂಗ್, ಮಾತುಕತೆ ನಡೆದಿದೆ.