ಮುಂಬೈ(ಮಹಾರಾಷ್ಟ್ರ):ಬರೋಬ್ಬರಿ 24 ವರ್ಷಗಳ ಹಿಂದೆ ಮನೆಯಲ್ಲಿ ಕಳ್ಳತನವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಇದೀಗ ವಾಪಸ್ ಸಿಕ್ಕಿದೆ. ಮಹಾರಾಷ್ಟ್ರದ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
1998ರಲ್ಲಿ ಅರ್ಜುನ್ ದಾಸ್ವಾನಿ ಕುಟುಂಬದಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ವೇಳೆ ಪುರಾತನ ಕಾಲದ ಎರಡು ಚಿನ್ನದ ನಾಣ್ಯ, ಚಿನ್ನದ ಬಳೆ ಮತ್ತು ಎರಡು ಗೋಲ್ಡ್ ಬಿಸ್ಕೆಟ್ಗಳನ್ನ ಖದೀಮರು ಕದ್ದೊಯ್ದಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಇದನ್ನೂ ಓದಿರಿ:ಗುಜರಾತ್ನಲ್ಲಿ ಕಿಶನ್ ಹತ್ಯೆ ಪ್ರಕರಣ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿಚಾರ್ಜ್
24 ವರ್ಷಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿತ್ತು. ಇದರಲ್ಲಿ ತಮಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ದಾಸ್ವಾನಿ ಕುಟುಂಬ ಸಮ್ಮುನಾಗಿಬಿಟ್ಟಿತ್ತು. ಕೊನೆಯದಾಗಿ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಇದೀಗ ಕುಟುಂಬಕ್ಕೆ ಚಿನ್ನಾಭರಣ ಹಸ್ತಾಂತರ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಸಿಪಿ ಪಾಂಡುರಂಗ ಶಿಂಧೆ, ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಮತ್ತಿಬ್ಬರಿಗೋಸ್ಕರ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಚಿನ್ನಾಭರಣ ಮಾರಾಟ ಮಾಡದಂತೆ ಕೋರ್ಟ್ ಆದೇಶ :24 ವರ್ಷಗಳ ನಂತರ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳುವಲ್ಲಿ ದಾಸ್ವಾನಿ ಕುಟುಂಬ ಯಶಸ್ವಿಯಾಗಿದೆ. ಆದರೆ, ಈ ಚಿನ್ನ ಮಾರಾಟ ಮಾಡುವಂತಿಲ್ಲ ಎಂದು ಮುಂಬೈ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ವಶಕ್ಕೆ ಪಡೆದುಕೊಂಡುರುವ ಚಿನ್ನದ ನಾಣ್ಯದ ಮೇಲೆ ಲಂಡನ್ ರಾಣಿ ಎಲಿಜಬೆತ್ ಚಿತ್ರವಿದೆ. ಹೀಗಾಗಿ, ಮಾರಾಟ ಮಾಡದಂತೆ ತಿಳಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ