ಶ್ರೀನಗರ: ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ತುರ್ಕ್ವಾಂಗಮ್ ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಕ್ರಾಸ್ ಫೈರಿಂಗ್ನಲ್ಲಿ ಓರ್ವ ನಾಗರಿಕ ಬಲಿಯಾಗಿದ್ದಾನೆ. ಲಿಟ್ಟರ್ ಪುಲ್ವಾಮಾವನ್ನು ತುರ್ಕ್ವಾಂಗಮ್ ಹಾಗೂ ಶೋಪಿಯಾನ್‌ಗೆ ಸಂಪರ್ಕಿಸುವ ಸೇತುವೆ ಬಳಿ ಪುಲ್ವಾಮಾದ ಸಿಆರ್ಪಿಎಫ್-182Bn/ಎಸ್ಓಜಿ ನ ಜಂಟಿ ಗಸ್ತು ತಂಡದ ಮೇಲೆ ಉಗ್ರನೊಬ್ಬ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರು ಮತ್ತು ನಮ್ಮ ಜಂಟಿ ತಂಡದ ನಡುವಿನ ಗುಂಡಿನ ಚಕಮಕಿಯಲ್ಲಿ, ಶೋಯಬ್ ಅಹ್ಮದ್ ಗನಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಪುಲ್ವಾಮಾ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.