ಲಖನೌ(ಉತ್ತರ ಪ್ರದೇಶ):ದೇಶಾದ್ಯಂತ ರಣ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ದು, ಎಲ್ಲರೂ ತಂಪು ಪಾನೀಯಗಳ ಮೊರೆ ಹೊಗ್ತಿದ್ದಾರೆ. ಆದರೆ, ಇಲ್ಲೊಬ್ಬ ಪುಟ್ಟ ಬಾಲಕ ಸುಡು ಬಿಸಿಲಿನಲ್ಲಿ ಕುಳಿತುಕೊಂಡು ವ್ಯಾಪಾರ ಮಾಡ್ತಿರುವ ರಸ್ತೆ ಬದಿ ವ್ಯಾಪಾರಿಗಳಿಗೆ ನೀರಿನ ಬಾಟಲಿ ನೀಡಿ, ಎಲ್ಲರ ಹೃದಯ ಗೆದ್ದಿದ್ದಾನೆ.
ಉತ್ತರ ಪ್ರದೇಶ ಐಎಎಸ್ ಅಧಿಕಾರಿ ಅವನೀಶ್ ಸರಣ್ ಈ ವಿಡಿಯೋ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನಿಮ್ಮ ಚಿಕ್ಕದಾದ ಸಹಾಯ ಇನ್ನೊಬ್ಬರ ದಿನವನ್ನ ವಿಶೇಷವಾಗಿಸಬಹುದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್ 2 ಅಬ್ಬರದ ನಡುವೆ ಮಕಾಡೆ ಮಲಗಿದ ಹಿಂದಿಯ ರನ್ವೇ 34, ಹೀರೋಪಂತಿ 2!
ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಚಿಕ್ಕ ಮಗುವೊಂದು ಕೈಯಲ್ಲಿ ಮಿನಿರಲ್ ವಾಟರ್ ಬಾಟಲ್ ಬಾಕ್ಸ್ ಹಿಡಿದುಕೊಂಡು, ರಸ್ತೆ ಬದಿ ಕುಳಿತುಕೊಂಡಿರುವ ಹೂವಿನ ವ್ಯಾಪಾರಿಗಳಿಗೆ ಹಂಚಿಕೆ ಮಾಡ್ತಿದೆ. ಮಗುವಿನಿಂದ ನೀರಿನ ಬಾಟಲಿ ತೆಗೆದುಕೊಂಡಿರುವ ವೃದ್ಧೆಯೋರ್ವರು ಪುಟಾಣಿಗೆ ಆಶೀರ್ವಾದ ಸಹ ಮಾಡಿದ್ದಾರೆ. ಐಎಎಸ್ ಅಧಿಕಾರಿ ಶೇರ್ ಮಾಡಿರುವ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮೆಚ್ಚುಗೆಗೆ ಕಾರಣವಾಗಿದೆ.
ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ 2.20 ಲಕ್ಷಕ್ಕೂ ಅಧಿಕ ಸಲ ವೀಕ್ಷಣೆಗೊಳಗಾಗಿದ್ದು, 14,000ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.