ಮಂಡಿ(ಹಿಮಾಚಲ ಪ್ರದೇಶ): ಫುಟ್ಬಾಲ್ ಆಡುತ್ತಿದ್ದ ವೇಳೆ ಏಕಾಏಕಿ ಬಿದ್ದು 15 ವರ್ಷದ (15 year old child died) ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ(CCTV Video)ಯಲ್ಲಿ ಸೆರೆಯಾಗಿದೆ.
ಮಂಡಿಯ ಖಾಲಿಯಾರ್ ವಾರ್ಡ್ನಲ್ಲಿ ಇಬ್ಬರು ಮಕ್ಕಳು ಫುಟ್ಬಾಲ್ ಆಟ ಆಡುತ್ತಿದ್ದರು. ಈ ವೇಳೆ ಬಾಲಕ ದಿಢೀರ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದೆ. ಇದರ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲಿಸಿದ್ದಾರೆ. ಅಲ್ಲದೇ ಈಗಾಗಲೇ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಾಲಕನ ಶವವನ್ನ ಸಂಬಂಧಿಕರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಫುಟ್ಬಾಲ್ ಆಡ್ತಿದ್ದಾಗ ಏಕಾಏಕಿ ಬಿದ್ದು ಬಾಲಕ ಸಾವು.. ಇದನ್ನೂ ಓದಿರಿ:ನ.16ರಿಂದ ದರ್ಶನಕ್ಕೆ ಶಬರಿಮಲೆ ಮುಕ್ತ.. ಪ್ರತಿ ದಿನ 25 ಸಾವಿರ ಭಕ್ತರಿಗೆ ಅವಕಾಶ..
ಬಾಲಕ ಕೆಳಗೆ ಬೀಳುತ್ತಿರುವುದನ್ನ ನೋಡಿರುವ ಮಹಿಳೆಯೋರ್ವಳು ಅಲ್ಲಿಗೆ ಆಗಮಿಸಿ ಬಾಲಕನನ್ನು ಎಬ್ಬಿಸುವ ಕೆಲಸ ಮಾಡಿದ್ದಾಳೆ. ಅದು ಫಲ ನೀಡಿಲ್ಲ. ಘಟನೆ ಬಗ್ಗೆ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕ ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೃದಯಾಘಾತದಿಂದ ಬಾಲಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಜಾಂಶ ಗೊತ್ತಾಗಲಿದೆ. ಮೃತ ಬಾಲಕನನ್ನು 15 ವರ್ಷದ ಹುಶಲ್ ಶರ್ಮಾ ಎಂದು ಗುರುತಿಸಲಾಗಿದೆ.