ಗುಂಟೂರು(ತೆಲಂಗಾಣ):ಅಮೆರಿಕದಲ್ಲಿ ಕೆಲಸ ಮಾಡ್ತಿದ್ದ ಯುವಕನೊಬ್ಬ ಬರೋಬ್ಬರಿ 8 ಯುವತಿಯರ ಜೊತೆ ಮದುವೆ ಮಾಡಿಕೊಂಡು ಮೋಸ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದೀಗ ಆತನ ನಿಜ ಬಣ್ಣ ಬಯಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೂಲತಃ ವಿಜಯವಾಡದ 46 ವರ್ಷದ ವ್ಯಕ್ತಿ ಸದ್ಯ ಅಮೆರಿಕದಲ್ಲಿ ವಾಸವಾಗಿರುವುದಾಗಿ ತಿಳಿದು ಬಂದಿದೆ.
ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿ ಅಮೆರಿಕದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿರುವ ವ್ಯಕ್ತಿ ವರ್ಷದಲ್ಲಿ ಎರಡು ತಿಂಗಳು ಹೈದರಾಬಾದ್ಗೆ ಆಗಮಿಸುತ್ತಾರೆ. ಈ ವೇಳೆ ಯುವತಿಯರ ಜೊತೆ ಮದುವೆ ಮಾಡಿಕೊಂಡು, ಅವರಿಂದ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಚಿನ್ನಾಭರಣ ಪಡೆದುಕೊಳ್ಳುತ್ತಾನೆ. ಎರಡು ತಿಂಗಳ ಕಾಲ ಐಷಾರಾಮಿ ಜೀವನ ನಡೆಸಿ, ಅಮೆರಿಕಕ್ಕೆ ವಾಪಸ್ ಹೋಗುತ್ತಾರೆ.
ಎರಡು ತಿಂಗಳ ಐಷಾರಾಮಿ ಜೀವನ: ಮದುವೆ ಮಾಡಿಕೊಂಡು ಎರಡು ತಿಂಗಳ ಕಾಲ ಐಷಾರಾಮಿ ಜೀವನ ನಡೆಸಿ, ಅವರ ನಗ್ನ ಫೋಟೋ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಾನೆ. ಈತನ ಬಗ್ಗೆ ಯುವತಿಯರಿಗೆ ಗೊತ್ತಾಗುತ್ತಿದ್ದಂತೆ ಅವರಿಗೆ ಹಣ ನೀಡಿ ಸೆಟಲ್ಮೆಂಟ್ ಮಾಡಿಕೊಳ್ಳುತ್ತಾನೆ. ಅಥವಾ ವಿಚ್ಛೇದನ ನೀಡುತ್ತಾನೆ. ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದಾಗ ಮಹಿಳೆಯರ ಬೆತ್ತಲೆ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ.