ಪುಣೆ (ಮಹಾರಾಷ್ಟ್ರ): ಗಿಳಿಯೊಂದರ ಶಿಳ್ಳೆ ಅದರ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ. ಅಕ್ಕಪಕ್ಕದ ವಾಸಿಗಳಿಗೆ ಗಿಳಿ ಶಿಳ್ಳೆ ಹೊಡೆದು ತೊಂದರೆ ನೀಡುತ್ತಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಈ ಕುರಿತು ಖಡ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 5 ರಂದು ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. ಸುರೇಶ ಅಂಕುಶ ಶಿಂಧೆ ದೂರು ದಾಖಲಿಸಿದ್ದಾರೆ. ಪುಣೆಯ ಖಡ್ಕಿ ಪೊಲೀಸ್ ಠಾಣೆಯಲ್ಲಿ ಗಿಳಿ ಮಾಲೀಕ ಅಕ್ಬರ್ ಅಮ್ಜದ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.