ರಾಯಗಢ(ಮಹಾರಾಷ್ಟ್ರ): ಸರಕು ಹೊತ್ತು ಸಾಗುತ್ತಿದ್ದ ದೋಣಿಯೊಂದು ಇಲ್ಲಿನ ಕರಾವಳಿ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ 16 ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಯಶಸ್ವಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ತುಣುಕು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
16 ಜನರ ರಕ್ಷಣೆ ಮಾಡಿದ ಭಾರತೀಯ ಕೋಸ್ಟ್ ಗಾರ್ಡ್ ಇಂದು ಬೆಳಗ್ಗೆ ರಾಯಗಢ ಕರಾವಳಿಯಲ್ಲಿ ಈ ಘಟನೆ ನಡೆದಿದ್ದು, ಜೆಎಸ್ಡಬ್ಲ್ಯು ಕಂಪನಿಗೆ ಸೇರಿದ ಸರಕು ಸಾಗಣೆ ದೋಣಿ ಇದಾಗಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ನಾವಿಕರು ಸೇರಿದಂತೆ ಎಲ್ಲರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಮುದ್ರದಲ್ಲಿ ಮುಳುಗಿದ ಸರಕು ಸಾಗಣಿ ದೋಣಿ ಪ್ರತಿಕೂಲ ಹವಾಮಾನ ಹಾಗೂ ಸಮುದ್ರದಲ್ಲಿನ ವೈಪರಿತ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ನಾವಿಕರಾಗಿದ್ದ ಸುಭದ್ರಾ ಕುಮಾರಿ ಚೌಹಾನ್ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಟ್ವೀಟ್ ಮಾಡಿದೆ.
ಇದನ್ನೂ ಓದಿರಿ: ರಾಯಗಢ ಕಡಲ ತೀರದಲ್ಲಿ 8 ಮೃತದೇಹಗಳು ಪತ್ತೆ: ಬಾರ್ಜ್ ದುರಂತದಲ್ಲಿ ನಾಪತ್ತೆಯಾದವರ ಶವ ಶಂಕೆ
ತೌಕ್ತೆ ಚಂಡಮಾರುತದಿಂದಾಗಿ ಕಳೆದ ತಿಂಗಳು ಮುಂಬೈ ಕರಾವಳಿಯಲ್ಲಿ P-305 ಬೋಟ್ ಮುಳುಗಿತ್ತು. ಇದರಲ್ಲಿದ್ದ 261 ಜನರ ಪೈಕಿ 188 ಮಂದಿ ರಕ್ಷಣೆ ಮಾಡಲಾಗಿತ್ತು. ಆದರೆ, 61 ಜನರು ಸಾವನ್ನಪ್ಪಿದ್ದರು.