ಗುಂಟೂರು(ಆಂಧ್ರಪ್ರದೇಶ):ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರೊಂದು ಕಾಲುವೆಗೆ ಬಿದ್ದು ಇಬ್ಬರು ನೀರು ಪಾಲಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಆಡಿಗೊಪ್ಪಳ ಬಳಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ನಾಪತ್ತೆಯಾದವರು ಆಂಧ್ರಪ್ರದೇಶದ ಸರ್ಕಾರಿ ಸಚೇತಕ ಪಿನ್ನೆಳ್ಳಿ ಅವರ ಸೋದರ ಸಂಬಂಧಿಯಾದ ಮದನ್ ಮೋಹನ್ ಅವರ ಕುಟುಂಬಸ್ಥರಾಗಿದ್ದಾರೆ.
ಮದನ್ ಮೋಹನ್ ಅವರ ಕುಟುಂಬಸ್ಥರು ವಿಜಯವಾಡಕ್ಕೆ ತೆರಳುತ್ತಿದ್ದರು. ಈ ವೇಳೆ, ಗುಂಟೂರಿನ ಅಡಿಗೊಪ್ಪಳ ಬಳಿ ಇರುವ ಸಾಗರ್ ಬಲದಂಡೆ ಕಾಲುವೆಯ ಮೇಲೆ ಕಾರು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಆಯತಪ್ಪಿ ಕಾಲುವೆಗೆ ಬಿದ್ದಿದೆ.