ಮುಂಬೈ:ನವಿ ಮುಂಬೈನ ನೆರೂಲ್ನಲ್ಲಿ ಐದಂತಸ್ತಿನ ಕಟ್ಟಡದ ಸ್ಲ್ಯಾಬ್ಗಳು ಕುಸಿದಿದ್ದು, ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವಿ ಮುಂಬೈನ ನೆರೂಲ್ ಪ್ರದೇಶದ ಸೆಕ್ಟರ್ 17ರಲ್ಲಿ ಜಿಮ್ಮಿ ಪಾರ್ಕ್ ಹೆಸರಿನ ಕಟ್ಟಡದ ಐದು ಸ್ಲ್ಯಾಬ್ಗಳು ಏಕಾಏಕಿ ಕುಸಿದಿವೆ. ಐದು ಸ್ಲ್ಯಾಬ್ಗಳು ಏಕಕಾಲಕ್ಕೆ ಕುಸಿದಿರುವುದು ಕಟ್ಟಡಕ್ಕೆ ಭಾರೀ ಅಪಾಯ ತಂದೊಡ್ಡಿದೆ. ಸ್ಲ್ಯಾಬ್ನ ಅಡಿಯಲ್ಲಿ ಸಿಲುಕಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ.
ಐದಂತಸ್ತಿನ ಕಟ್ಟಡದ ಸ್ಲ್ಯಾಬ್ ಕುಸಿತ.. 7 ಜನರಿಗೆ ಗಾಯ ಆಸ್ಪತ್ರೆಗೆ ದಾಖಲು - ಕಟ್ಟಡದ ಕುಸಿತದಲ್ಲಿ 7 ಜನರಿಗೆ ಗಾಯ
ಮುಂಬೈನ ಐದಂತಸ್ತಿನ ಕಟ್ಟಡವೊಂದು ಕುಸಿದಿದ್ದು, 7 ಜನರು ಗಾಯಗೊಂಡಿದ್ದಾರೆ. 5 ಸ್ಲ್ಯಾಬ್ಗಳು ಏಕಕಾಲಕ್ಕೆ ಕುಸಿದಿದ್ದು, ಕಟ್ಟಡಕ್ಕೆ ಭಾರಿ ಹಾನಿ ಉಂಟಾಗಿದೆ.
ಮುಂಬೈನ 6 ಅಂತಸ್ತಿನ ಕಟ್ಟಡದ 5 ಸ್ಲ್ಯಾಬ್ ಕುಸಿತ
ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿರುವ ಜನರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿದ್ದಾರೆ. ಕಟ್ಟಡದ ಸ್ಲ್ಯಾಬ್ ಕುಸಿತ ಭೀಕರವಾಗಿದ್ದು, ಕಟ್ಟಡವೇ ಉರುಳಿ ಬೀಳುವ ಸಾಧ್ಯತೆ ಇದೆ. ಘಟನೆಯ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಓದಿ:ನಕಲಿ ಡಿಗ್ರಿ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡವರಿಗೆ ಶಾಕ್.. ವಜಾಗೊಳಿಸಲು ಮುಂದಾದ ಪಂಜಾಬ್ ಸಿಎಂ