ಕಚ್: ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನನ್ನ ಗುಜರಾತ್ ಎಟಿಎಸ್ ಬಂಧಿಸಿದೆ. ಕಚ್‌ನ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಗಾಂಧಿಧಾಮ್ ಘಟಕದಲ್ಲಿ ನಿಯೋಜನೆಗೊಂಡಿದ್ದ ಕಾಶ್ಮೀರಿ ಜವಾನ ಬೇಹುಗಾರಿಕೆ ವೇಳೆ ಸಿಕ್ಕಿಬಿದ್ದಿದ್ದಾನೆ.
ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನ ಬಂಧನ - ಕಚ್‌ನ ಗಡಿ ಭದ್ರತಾ ಪಡೆ
ಕಚ್ ಗಾಂಧಿಧಾಮದ 74 ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ಯೋಧ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ.
ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಬಿಎಸ್‌ಎಫ್ ಯೋಧ ಬಂಧನ
ಈ ಕಾಶ್ಮೀರಿ ಜವಾನನು ತ್ರಿಪುರಾದಲ್ಲಿಯೂ ಕರ್ತವ್ಯದಲ್ಲಿದ್ದನು ಮತ್ತು ಅಂದಿನಿಂದ ಮೇಲ್ವಿಚಾರಣೆಗೆ ಒಳಪಟ್ಟಿದ್ದನು. ನಂತರ ಕಚ್ ಗಾಂಧಿಧಾಮದ 74 ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು. ಈತ ಏಳು ವರ್ಷಗಳ ಹಿಂದೆ ಬಿಎಸ್ಎಫ್ಗೆ ನೇಮಕಗೊಂಡಿದ್ದ.
ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜೌರಿ ಜಿಲ್ಲೆಯ ಜವಾನ ತನ್ನ ಬೆಟಾಲಿಯನ್ ಜೊತೆ ಎರಡು ತಿಂಗಳ ಹಿಂದೆ ಕಚ್‌ನ ಗಾಂಧಿಧಾಮಕ್ಕೆ ಬಂದಿದ್ದಾನೆ. ಈ ಬಗ್ಗೆ ಗುಪ್ತಚರ ಸಂಸ್ಥೆ ಕಣ್ಣಿಟ್ಟಿತ್ತು.