ಗುಂಟೂರು (ಆಂಧ್ರಪ್ರದೇಶ):ಕ್ಯಾನ್ಸರ್ನಿಂದ ಬಳಲುತ್ತಿರುವ ಶೇಖ್ ರೆಹಾಲ್ ಎಂಬ ಬಾಲಕನ ಪೊಲೀಸ್ ಆಗಬೇಕೆನ್ನುವ ಇಚ್ಛೆಯನ್ನು ಗುಂಟೂರು ಅರ್ಬನ್ ಎಸ್ಪಿ ಆರ್.ಎನ್. ಅಮ್ಮಿರಡ್ಡಿ ಈಡೇರಿಸಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿರುವ ಆ ಬಾಲಕನನ್ನು ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ಬಾಲಕನ ಆಸೆ ಈಡೇರಿಸಿದ್ದಾರೆ. ಬಾಲಕನನ್ನು ಆತ್ಮೀಯವಾಗಿ ಸ್ವಾಗತಿಸಿ ಆತನ ಕುರಿತು ವಿಚಾರಿಸಿದ್ದಾರೆ.