ಕರ್ನಾಟಕ

karnataka

ETV Bharat / bharat

ಅಜ್ಜನ ಮೊಬೈಲ್​​ನಲ್ಲಿ ಗೇಮ್​ ಆಡಿ 36 ಲಕ್ಷ ರೂ. ಸ್ವಾಹಾ ಮಾಡಿದ ಮೊಮ್ಮಗ!

ಅಜ್ಜನ ಮೊಬೈಲ್​​ನಲ್ಲಿ ಫ್ರೀಫೈರ್​​ ಗೇಮ್​ ಆ್ಯಪ್​ ಡೌನ್​ಲೋಡ್​ ಮಾಡಿದ ಮೊಮ್ಮಗ 10 ಸಾವಿರದಿಂದ ಲಕ್ಷಗಳವವರೆಗೂ ಗೇಮ್​ ಆಡಿ, ಅಜ್ಜನ ಬ್ಯಾಂಕ್​ ಖಾತೆಯಲ್ಲಿದ್ದ ಹಣವನ್ನೆಲ್ಲ ಖಾಲಿ ಮಾಡಿದ್ದಾನೆ.

A boy lost 44 lakhs rupee with gaming in grand fathers mobile
ಅಜ್ಜನ ಮೊಬೈಲ್​​ನಲ್ಲಿ ಗೇಮ್​ ಆಡಿ 44 ಲಕ್ಷ ರೂ. ಸ್ವಾಹಾ ಮಾಡಿದ ಮೊಮ್ಮಗ

By

Published : Jun 3, 2022, 7:45 PM IST

Updated : Jun 4, 2022, 7:09 AM IST

ಹೈದರಾಬಾದ್ ​(ತೆಲಂಗಾಣ): ಇಂದಿನ ಕಾಲದ ಮಕ್ಕಳು ತುಂಬಾ ಆ್ಯಕ್ಟಿವ್​​. ಅದು ಎಷ್ಟರ ಮಟ್ಟಿಗೆ ತಂತ್ರಜ್ಞಾನ ಬಳಕೆಯಲ್ಲಿ ಹಿರಿಯಗಿಂತ ಒಂದು ಹಜ್ಜೆ ಮುಂದೆಯೇ ಇರುತ್ತಾರೆ. ಅದರಲ್ಲೂ ಮೊಬೈಲ್​ನಲ್ಲಿ ಎಷ್ಟೋ ವಿಷಯಗಳು ದೊಡ್ಡವರಿಗಿಂತ ಮಕ್ಕಳಿಗೇ ಹೆಚ್ಚು ಗೊತ್ತಿರುತ್ತದೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣ ಇದೆ. ಮೊಬೈಲ್​​ನಲ್ಲಿ ಗೇಮ್​​ ಆಡುವೆ ಎಂದು ಅಜ್ಜನ ಮೊಬೈಲ್​ ಪಡೆಯುತ್ತಿದ್ದ ಬಾಲಕನೊಬ್ಬ ಬ್ಯಾಂಕ್​ ಖಾತೆಯಲ್ಲಿರುವ 36 ಲಕ್ಷ ರೂ. ಹಣವನ್ನು ಸ್ವಾಹಾ ಮಾಡಿದ್ದಾನೆ.!

ಹೌದು, ಹೈದರಾಬಾದ್​ನ ಅಂಬರ್​ಪೇಟ್​​ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಷ್ಟೊಂದು ಹಣವನ್ನು ಕಳೆದುಕೊಂಡಿದ್ದು ಓರ್ವ ನಿವೃತ್ತ ಪೊಲೀಸ್​ ಎಂಬುದೇ ಮತ್ತೊಂದು ಅಚ್ಚರಿ. ಅಜ್ಜನ ಮೊಬೈಲ್​​ನಲ್ಲಿ ಫ್ರೀಫೈರ್​​ ಗೇಮ್​ ಆ್ಯಪ್​ ಡೌನ್​ಲೋಡ್​ ಮಾಡಿದ ಮೊಮ್ಮಗ 10 ಸಾವಿರದಿಂದ ಲಕ್ಷಗಳವವರೆಗೂ ಗೇಮ್​ ಆಡಿ, ಅಜ್ಜನ ಬ್ಯಾಂಕ್​ ಖಾತೆಯಲ್ಲಿದ್ದ ಹಣವನ್ನೆಲ್ಲ ಖಾಲಿ ಮಾಡಿದ್ದಾನೆ.

ಪ್ರೀತಿಯಿಂದ ಮೊಬೈಲ್​ ಕೊಟ್ಟಿದ್ದ ತಾತ: ನಿವೃತ್ತ ಪೊಲೀಸ್​ ಆಗಿರುವ ಅಜ್ಜ ಮೊಮ್ಮಗನ ಮೇಲಿನ ಪ್ರೀತಿಯಿಂದ ಆತನಿಗೆ ಮೊಬೈಲ್​​ ಕೊಡುತ್ತಿದ್ದ. ಮೊಮ್ಮಗನಿಗೆ ಗೇಮ್​ ಆಡುವ ಇಚ್ಛೆ ಇದ್ದಿದ್ದರಿಂದ ಯಾವುದೇ ಗೇಮ್​​ ಆ್ಯಪ್​ ಡೌನ್​ಲೋಡ್​​ ಮಾಡಿದರೂ ಅಜ್ಜ ಏನೂ ಹೇಳುತ್ತಿರಲಿಲ್ಲ. ಹಾಗೆ ಒಂದು ದಿನ ಫ್ರೀಫೈರ್​​ ಗೇಮ್​ ಆ್ಯಪ್​ನ್ನು ಮೊಮ್ಮಗ ಡೌನ್​ಲೋಡ್​ ಮಾಡಿಕೊಂಡಿದ್ದ. ಇತ್ತ, ಅಜ್ಜ ಇದೇ ಮೊಬೈಲ್​ನಲ್ಲಿ ಡಿಜಿಟಲ್​​ ಪೇಮೆಂಟ್, ನೆಟ್​​ ಬ್ಯಾಂಕಿಂಗ್​ ಸಹ ಬಳಕೆ ಮಾಡುತ್ತಿದ್ದ.

ಇದರಿಂದ ಗೇಮ್​ ಆಡುತ್ತಿರಬೇಕಾದರೆ ಪೇಮೆಂಟ್​​ ಎಂದು ಬಂದಾಗ ನೇರವಾಗಿ ಬ್ಯಾಂಕ್​ ಖಾತೆಗೆ ಲಿಂಕ್​​ ಆಗಿದೆ. ಮೊದಲಿಗೆ 10 ಸಾವಿರ ರೂ. ಪಾವತಿಯಾಗಿದ್ದು, ಇದರಿಂದ 60 ಬಾರಿ ಮೊಮ್ಮಗ ಆಟವಾಗಿದ್ದಾನೆ. ಮುಂದೆ ಬೇರೆ - ಬೇರೆ ಹಂತಗಳಿಗೆ ಗೇಮ್​ ತಲುಪಿದಾಗ ಮೊಬೈಲ್‌ನಲ್ಲಿ ನೆಟ್ ಬ್ಯಾಂಕಿಂಗ್ ಲಿಂಕ್​ ಇರುವುದರಿಂದ ಹಣ ತಾನೇ ಕಡಿತವಾಗುತ್ತಲೇ ಹೋಗಿದೆ. ಹೀಗೆ 50 ಸಾವಿರ ರೂ., 1,25 ಲಕ್ಷ ರೂ., 1.45 ಲಕ್ಷ ರೂ., 1.60 ಲಕ್ಷ ರೂ., 1.95 ಲಕ್ಷ ರೂ. ಹಾಗೂ 2 ಲಕ್ಷ ರೂ.ವರೆಗೂ ಹಣ ಕಡಿತವಾಗಿ ಒಟ್ಟಾರೆ 44 ಲಕ್ಷ ರೂ. ಸ್ವಾಹ ಆಗಿದೆ.

ಬ್ಯಾಂಕ್​​ ಖಾತೆಯಲ್ಲಿ ಹಣವೇ ಖಾಲಿ: ಈ ನಡುವೆ ಹಣ ವಿತ್​ಡ್ರಾ ಮಾಡಲು ಅಜ್ಜ ಬ್ಯಾಂಕ್​ಗೆ ಹೋಗಿದ್ದಾರೆ. ಆಗ ನಿಮ್ಮ ಖಾತೆಯಲ್ಲಿ ಹಣವೇ ಇಲ್ಲ ಎಂದು ಬ್ಯಾಂಕ್​ನವರು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಅಜ್ಜ, ಖಾತೆಯ ವಿವರಗಳನ್ನು ಪಡೆದಿದ್ದಾರೆ. ಆಗ ಫ್ರೀಫೈರ್​​ ಗೇಮ್​​ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಹೀಗಾಗಿ ಅಜ್ಜ ಮತ್ತು ಕುಟುಂಬಸ್ಥರು ಸದ್ಯ ಸೈಬರ್ ಕ್ರೈಂ ಪೊಲೀಸ್​ ಠಾಣೆಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:UPI ಪಾವತಿ ವೇಳೆ ಎಚ್ಚರ: ನಿಮ್ಮ ಖಾತೆಗೆ ಕನ್ನ ಹಾಕುವ ಸೈಬರ್​ ಕಳ್ಳರಿದ್ದಾರೆ!

Last Updated : Jun 4, 2022, 7:09 AM IST

ABOUT THE AUTHOR

...view details