ನಾಗ್ಪುರ (ಮಹಾರಾಷ್ಟ್ರ):ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೂ (ಡಿಆರ್‌ಡಿಒ) ಬಾಂಬ್ ಪತ್ತೆ ಮಾಡುವ ಹಾಗೂ ಅದನ್ನು ವಿನಾಶಗೊಳಿಸುವ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಭಾರತೀಯ ಸೇನೆಗೆ ಮತ್ತಷ್ಟು ಬಲ ಬಂದಂತಾಗಿದೆ. ಈ ರೋಬೋಟ್ ಶೀಘ್ರದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. ಪ್ರಸ್ತುತ ಈ ರೋಬೋಟ್ ಅನ್ನು ಡಿಆರ್‌ಡಿಒ ಭಾರತೀಯ ವಿಜ್ಞಾನ ಕಾಂಗ್ರೆಸ್ ಇದನ್ನೂ ಪ್ರದರ್ಶಿಸಿದೆ. ಸಾಮಾನ್ಯ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ರೋಬೋಟ್ಗಳ ಬಗ್ಗೆ ತಿಳಿದುಕೊಳ್ಳಲು ಮುಗಿ ಬೀಳುತ್ತಿದ್ದಾರೆ.
ಡಿಆರ್‌ಡಿಒ ಭಾರತೀಯ ವಿಜ್ಞಾನ ಕಾಂಗ್ರೆಸ್ ಪ್ರದರ್ಶನ ಡಿಆರ್‌ಡಿಒ ಶಿಬಿರದಲ್ಲಿ ಜನಸಂದಣಿ:ನಾಗ್ಪುರ ರಾಷ್ಟ್ರಸಂತ್ ತುಕ್ಡೋಜಿ ಮಹಾರಾಜ್ ವಿಶ್ವವಿದ್ಯಾಲಯದ ಕ್ಯಾಂಪಸ್ 108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಆಯೋಜಿಸಿದೆ. ಈ ಸ್ಥಳದಲ್ಲಿ ನೂರಾರು ಪ್ರಯೋಗ ಮತ್ತು ಚಟುವಟಿಕೆ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಡಿಆರ್‌ಡಿಒ ಶಿಬಿರದಲ್ಲಿ ದಿನಾಲೂ ಹೆಚ್ಚು ಜನಸಂದಣಿ ಕಂಡುಬರುತ್ತಿದೆ. ಪ್ರತಿಯೊಬ್ಬ ಭಾರತೀಯನಿಗೆ ಸೇನೆಯ ಭವ್ಯ ಇತಿಹಾಸ ತಿಳಿದುಕೊಳ್ಳುವ ಆಸೆ ಇರುತ್ತದೆ. ಅದೇ ಸಮಯದಲ್ಲಿ, ಹೊಸ ತಂತ್ರಜ್ಞಾನ ಮತ್ತು ಸೇನೆಯ ಸಂಪನ್ಮೂಲಗಳ ಮಾಹಿತಿ ಪಡೆಯಲು ನಿತ್ಯ ಸಾವಿರಾರು ನಾಗರಿಕರು DRDO ಡೋಮ್‌ಗೆ ಆಗಮಿಸುತ್ತಿದ್ದಾರೆ.
ಇದನ್ನು ಓದಿ: ತಾಯಿಯ ಅಪಘಾತದಿಂದಲೇ ಪ್ರೇರಣೆ: ವಿದ್ಯಾರ್ಥಿನಿಯೇ ತಯಾರಿಸಿದಳು ಸ್ಮಾರ್ಟ್ ಹೆಲ್ಮೆಟ್.. ಏನಿದರ ವಿಶೇಷತೆ ಅಂತೀರಾ?
ಪ್ರಾಣ ಹಾನಿ ತಡೆಗೆ ರೋಬೋಟ್ ಸಹಕಾರಿ:ಗಡಿಯಾಚೆಗಿನ ಶತ್ರುಗಳನ್ನು ಹಿಮ್ಮೆಟ್ಟಿಸಲು ಮತ್ತು ದೇಶದೊಳಗೆ ಸಕ್ರಿಯವಾಗಿರುವ ಶತ್ರುಗಳನ್ನು ಮಟ್ಟಹಾಕಲು ಭಾರತೀಯ ಸೇನೆ ಯಾವಾಗಲೂ ಸಿದ್ಧವಾಗಿರುತ್ತದೆ. ಶತ್ರುಗಳನ್ನು ಸೋಲಿಸುವಾಗ ನಮ್ಮ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ಹೊಸ ಸಂಶೋಧನೆ ಸೈನಿಕರ ಅಮೂಲ್ಯ ಜೀವಗಳನ್ನು ಉಳಿಸಲಿದೆ. ಜನನಿಬಿಡ ಜನಸಂದಣಿ ಸ್ಥಳಗಳಲ್ಲಿ ಭಯೋತ್ಪಾದಕರು ಪ್ರಾಣಹಾನಿ ಉಂಟುಮಾಡುವ ಉದ್ದೇಶದಿಂದ ವಿನಾಶಕಾರಿ ಬಾಂಬ್‌ಗಳನ್ನು ಇಟ್ಟಿರುತ್ತಾರೆ. ಅಂಥ ಜಾಗದಲ್ಲಿ ಇಟ್ಟಿರುವ ಬಾಂಬ್‌ಗಳನ್ನು ಪತ್ತೆ ಹಚ್ಚಲು ಹಾಗೂ ವಿನಾಶಗೊಳಿಸಲು ಈ ನೂತನ ರೋಬೋಟ್ ಬಳಸಲಾಗುತ್ತಿದೆ. ಬಾಂಬ್ ಪತ್ತೆ ಮಾಡುವ ಜವಾಬ್ದಾರಿಯನ್ನು ಈ ರೋಬೋಟ್ ನಿಭಾಯಿಸಲಿದೆ.
ಇದನ್ನು ಓದಿ:ನೀವು ಎಲೆಕ್ಟ್ರಿಕ್ ಕಾರು ಹೊಂದಲು ಬಯಸುವಿರಾ?.. ಹಾಗಾದರೆ ನೀವು ಹೀಗೆ ಮಾಡಿ!
ದೂರದಿಂದ ನಿರ್ವಹಣೆ:ಈ ರೋಬೋಟ್‌ನ ಹೆಸರು ConfindSpace ಇದು ದೂರಿನಿಂದ ರಿಮೋಟ್ಲಿ ಆಪರೇಟೆಡ್ ವೆಹಿಕಲ್ದಿಂದ ನಿರ್ವಹಿಸಲ್ಪಡುತ್ತಿದೆ. ಈ ರೋಬೋಟ್ ಅನ್ನು 200 ರಿಂದ 500 ಮೀಟರ್ ದೂರದಿಂದ ಮೇಲ್ವಿಚಾರಣೆ ಮಾಡಿ ನಿರ್ವಹಿಸಬಹುದು. ರೈಲು ನಿಲ್ದಾಣಗಳಂಥ ಜನನಿಬಿಡ ಸ್ಥಳಗಳಲ್ಲಿಯೂ ಈ ರೋಬೋಟ್ ಅನ್ನು ಅತ್ಯಂತ ಆರಾಮದಾಯಕ ಬಳಸಬಹುದು. ರೋಬೋಟ್‌ಗೆ ಹಲವಾರು ಕ್ಯಾಮೆರಾ ಅಳವಡಿಸಲಾಗಿದೆ. ರೋಬೋಟ್ ಮಾನವ ರಹಿತ ಸ್ಥಳಗಳಿಗೆ ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿ ಬಾಂಬ್‌ಗಳನ್ನು ನಾಶಪಡಿಸುತ್ತದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಭಾರತೀಯ ಪೌರತ್ವ ಸಾಬೀತು ಪಡಿಸಲು ಕಾರ್ಗಿಲ್ ಯೋಧನಿಗೆ ನೋಟಿಸ್ ಜಾರಿ!..