ಅಮರಾವತಿ, ಮಹಾರಾಷ್ಟ್ರ: ವಾರ್ಧಾ ನದಿಯಲ್ಲಿ ಬೋಟ್ ಮುಳುಗಿ 11 ಮಂದಿ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗಲೇಗಾಂವ್ ಬಳಿ ದುರ್ಘಟನೆ ಸಂಭವಿಸಿದ್ದು, 3 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ - ಮಹಾರಾಷ್ಟ್ರ ಸುದ್ದಿ
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಾರ್ಧಾ ನದಿಯಲ್ಲಿ ಬೋಟ್ ಮುಳುಗಡೆಯಾಗಿ 11 ಮಂದಿ ನೀರುಪಾಲಾಗಿದ್ದಾರೆ.
![ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ A boat sank in the Wardha river in Amravati district, drowning 11 people](https://etvbharatimages.akamaized.net/etvbharat/prod-images/768-512-13059894-thumbnail-3x2-anm.jpg)
ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದೇ ಕುಟುಂಬದ ಹನ್ನೊಂದು ಮಂದಿ ಬೆಳಗ್ಗೆ 10 ಗಂಟೆ ಸುಮಾರಿಗೆ, ವಾರ್ಧಾ ನದಿಯ ಮೂಲಕ ಬೋಟ್ನಲ್ಲಿ ಮಹಾದೇವನ ದರ್ಶನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ನಿಫಾ ವೈರಸ್ ಶಂಕಿತ ವ್ಯಕ್ತಿಯ ಸ್ವ್ಯಾಬ್ ಮಾದರಿ ಪುಣೆಯ ಲ್ಯಾಬ್ಗೆ ರವಾನೆ, ಒಂದು ದಿನದೊಳಗೆ ವರದಿ: ಜಿಲ್ಲಾಧಿಕಾರಿ
Last Updated : Sep 14, 2021, 2:31 PM IST