ಕರ್ನಾಟಕ

karnataka

ETV Bharat / bharat

ಡ್ಯಾಮ್ ಗೆ ಹಾರಿ ಬಾಸ್ಕೆಟ್ ಬಾಲ್ ಕ್ರೀಡಾಪಟು ಆತ್ಮಹತ್ಯೆ: ತನಿಖೆ - ಆತ್ಮಹತ್ಯೆ ಪ್ರಕರಣ ತನಿಖೆ

ಬಿಹಾರದ ಬೆತುಲ್​ದ ಕೋಸ್ಮಿ ಡ್ಯಾಂನಲ್ಲಿ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟುವಿನ ಶವ ಪತ್ತೆ, ನಿಖರ ಕಾರಣ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

national basketball player prarathana  body found
ರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಪ್ರಾರ್ಥನಾ ಶವ ಪತ್ತೆ

By

Published : Nov 24, 2022, 5:03 PM IST

Updated : Nov 24, 2022, 7:44 PM IST

ಬೆತುಲ್(ಮಧ್ಯೆಪ್ರದೇಶ):ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ ಅವರು ಬೇತುಲ್‌ನ ಕೋಸ್ಮಿ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಗೃಹರಕ್ಷಕ ದಳದ ಸಹಾಯದಿಂದ ಅಣೆಕಟ್ಟೆಯಲ್ಲಿ ಶೋಧ ಕಾರ್ಯಾಚರಣೆ ಬಳಿಕ ಬಾಲಕಿ ಪ್ರಾರ್ಥನಾ ಶವ ಹೊರತೆಗೆದಿದ್ದು, ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಾರ್ಥನಾ(17) ಬಹಳ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಂಜ್ ಪ್ರದೇಶದ ಶಂಕರ್ ವಾರ್ಡ್‌ ನ ನಿವಾಸಿ ಪ್ರಾರ್ಥನಾ ಸಾಳ್ವೆ ಅವರು ಬುಧವಾರ ಸಂಜೆ ಬಾಸ್ಕೆಟ್‌ಬಾಲ್ ಅಭ್ಯಾಸ ಮಾಡಲು ಹೋಗಿದ್ದರು. ಸಂಜೆಯಾದರೂ ವಾಪಸ್ ಬಾರದಿದ್ದಾಗ ಮನೆಯವರು ಎಲ್ಲ ಕಡೆ ಹುಡುಕಾಡಿದ್ದಾರೆ. ಬಾಲಕಿ ಪತ್ತೆಯಾಗದಿದ್ದರಿಂದ ಆತಂಕಪಟ್ಟು, ಗಂಜ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಗುರುವಾರ ಬೆಳಗ್ಗೆ ಫೋರ್ಲೇನ್‌ನ ಕೋಸ್ಮಿ ಅಣೆಕಟ್ಟಿನ ಪಕ್ಕ ಸ್ಕೂಟಿ ನಿಂತಿರುವ ಬಗ್ಗೆ ಕೊತ್ವಾಲಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಗೃಹರಕ್ಷಕ ದಳದ ಸಹಾಯದಿಂದ ಪೊಲೀಸರು ಅಣೆಕಟ್ಟೆಯಲ್ಲಿ ಶೋಧ ನಡೆಸಿದ ವೇಳೆ ಬಾಲಕಿಯ ಶವ ಪತ್ತೆಯಾಗಿದೆ ಎಂದು ಕೊತ್ವಾಲಿ ಪೊಲೀಸ್‌ನ ಎಎಸ್‌ಐ ಅವಧೇಶ್ ವರ್ಮಾ ತಿಳಿಸಿದ್ದಾರೆ.

6 ತಿಂಗಳ ಹಿಂದೆ ಸಹೋದರ ಸಾವು : ಕೆಲವು ತಿಂಗಳ ಹಿಂದೆ ಇಂದೋರ್‌ನ ಫ್ಲಾಟ್‌ನಲ್ಲಿ ಬೆಂಕಿ ಅವಘಡದಲ್ಲಿ ಪ್ರಾರ್ಥನಾ ಹಿರಿಯ ಸಹೋದರ ಸಾವಿಗೀಡಾಗಿದ್ದರು. 6 ತಿಂಗಳಲ್ಲೇ ಅಣ್ಣ-ತಂಗಿಯ ಸಾವಿನಿಂದ ಇಡೀ ಕುಟುಂಬ ಆಘಾತದಲ್ಲಿದೆ.

ಇದನ್ನೂ ಓದಿ:ನೆಲಮಂಗಲ: ರೈಲ್ವೆ ಹಳಿ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ

Last Updated : Nov 24, 2022, 7:44 PM IST

ABOUT THE AUTHOR

...view details