ಕರ್ನಾಟಕ

karnataka

ETV Bharat / bharat

3 ವರ್ಷದ ಬಾಲಕಿ ನಾಪತ್ತೆ.. ಮಗಳನ್ನು 500ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಂದೆಯ ಆತಂಕ - ಮಗು ಮಾರಾಟ ಪ್ರಕರಣ

ಬಿಹಾರದ ಪಾಟ್ನಾದಲ್ಲಿ ಮೂರು ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರರು ತಮ್ಮ ಮಗುವನ್ನು 500 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಾಟ್ನಾದಲ್ಲಿ 3 ವರ್ಷದ ಬಾಲಕಿ ನಾಪತ್ತೆ
ಪಾಟ್ನಾದಲ್ಲಿ 3 ವರ್ಷದ ಬಾಲಕಿ ನಾಪತ್ತೆ

By

Published : Jun 25, 2022, 11:01 PM IST

ಪಾಟ್ನಾ (ಬಿಹಾರ): 3 ವರ್ಷದ ಬಾಲಕಿ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಮೂರು ದಿನಗಳಿಂದ ಮಗುವಿಗಾಗಿ ಹುಡುಕಾಟ ನಡೆಸಲಾಗುತ್ತದೆ. ಜೂನ್ 22ರಂದು ಸಂಜೆ ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಕಾಣೆಯಾಗಿದೆ. ನಿಗೂಢವಾಗಿ ಕಾಣೆಯಾದ ಬಾಲಕಿಯ ಹೆಸರು ಸನ್ಯಾ ಅಕಾ ಲಾಡೋ. ಮಗುವಿನ ತಂದೆ ಅತೀಫ್ ಆಜಾದ್ ಬಾಡಿಗೆದಾರ ಶಿಬು ಎಂಬುವವನ ಮೇಲೆ ಆರೋಪ ಮಾಡುತ್ತಿದ್ದಾರೆ. ಶಿಬು ತನ್ನ ಮಗುವನ್ನು 500 ರೂ.ಗೆ ಮಾರಾಟ ಮಾಡಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ.

ಅತೀಫ್ ಆಜಾದ್ ಮನೆಯಲ್ಲಿ ಬಾಡಿಗೆಗೆ ಇರುವ ಶಿಬು ಎನ್ನುವವನ ಜೊತೆ ಸಂಜೆ ಆಟವಾಡುತ್ತಿದ್ದ ಮಗು ಹೋಗಿರುವ ದೃಶ್ಯ ಪಕ್ಕದ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿಬು ಮಗುವನ್ನು ಪಾಟ್ನಾ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 10 ರ ಬಳಿ ಭಿಕ್ಷುಕ ಮಹಿಳೆಗೆ 500 ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಮಗುವಿನ ಕುಟುಂಬದವರು ಆರೋಪಿಸಿದ್ದಾರೆ.

ಪಾಟ್ನಾದ ಪಿರಬಾಹೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಹೇಳಿಕೆಯ ಆಧಾರದಲ್ಲಿ ಪೋಲೀಸರು ಬಾಲಕಿ ನಾಪತ್ತೆ ಆಗಿರುವುದಾಗಿ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಐಎಎಸ್ ಅಧಿಕಾರಿ ತಂದೆ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖಾ ತಂಡ ಮನೆಗೆ ಬಂದಾಗ ಮಗ 'ಆತ್ಮಹತ್ಯೆ'

ABOUT THE AUTHOR

...view details