ಛಾಪ್ರಾ: ವೈದ್ಯಕೀಯ ಲೋಕದಲ್ಲಿ ಕೆಲವು ವಿಸ್ಮಯಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇಲ್ಲಿ ನಡೆದಿರುವ ಘಟನೆ ಮಾತ್ರ ವಿಸ್ಮಯವಲ್ಲ. ಬದಲಾಗಿ ಮನುಷ್ಯನ ತಪ್ಪಿನಿಂದ ನಡೆದ ವಿಚಾರ ಎಂಬ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಇಡೀ ಆಸ್ಪತ್ರೆಯ ಸಿಬ್ಬಂದಿ ಇದೀಗ ಪೇಚಿಗೆ ಸಿಲುಕಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದೆ.
ಏನಿದು ಘಟನೆ: ಛಾಪ್ರಾದ ಸ್ಥಳೀಯ ವ್ಯಕ್ತಿಯಾದ 60 ವರ್ಷದ ಬಧೇ ಮಿಯಾನ್ ಮೂತ್ರಪಿಂಡದ ಕಾಯಿಲೆಗೆ ಒಳಗಾಗಿದ್ದರು. ಇವರಿಗೆ ಅಲ್ಟ್ರಾ ಸೌಂಡ್ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಅವರು ಪರೀಕ್ಷೆಗೆ ಒಳಗಾದಾಗ ಅವರಲ್ಲಿ ಗರ್ಭಕೋಶ ಪತ್ತೆಯಾಗಿದೆ. ಇದನ್ನು ಕೇಳಿದ ಅವರ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಇಷ್ಟು ವರ್ಷ ಇಲ್ಲದ ಈ ಸಮಸ್ಯೆ ಈ ಇಳಿವಯಸ್ಸಿನಲ್ಲಿ ಉಂಟಾಯಿತಾ ಎಂದು ಚಿಂತೆಗೆ ಕೂಡ ಕಾರಣವಾಗುತ್ತದೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ವೈದ್ಯರು ಕೂಡ ಗೊಂದಲಗೊಂಡಿದ್ದಾರೆ. ವೈದ್ಯಕೀಯ ಲೋಕದಲ್ಲಿ ಅಚ್ಚರಿಯಾಗುವಂತೆ ಈ ಘಟನೆ ನಡೆದಿದ್ಯಾ ಎಂಬ ಆತಂಕಕ್ಕೆ ವೈದ್ಯರು ಮತ್ತು ಕುಟುಂಬಸ್ಥರು ಒಳಗಾಗಿದ್ದಾರೆ. ಈ ಸಂಬಂಧ ವೈದ್ಯರೊಂದಿಗೆ ಕುಟುಂಬ ಮಾತುಕತೆ ನಡೆಸಿದ್ದು, ಎರಡನೇ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ
ಮತ್ತೊಮ್ಮೆ ಪರೀಕ್ಷೆಗೆ ಒಳಗಾದಾಗ ಆ ವ್ಯಕ್ತಿಯ ದೇಹದಲ್ಲಿ ಯಾವುದೇ ಗರ್ಭ ಕೋಶ ಪತ್ತೆಯಾಗಿಲ್ಲ. ಇದು ಅಲ್ಟ್ರಾ ಸೌಂಡ್ನಲ್ಲಿ ಪರೀಕ್ಷಕರು ಮಾಡಿದ ತಪ್ಪಿನಿಂದ ಈ ಘಟನೆ ನಡೆದಿದೆ. '60 ವರ್ಷದ ಬಧೇ ಮಿಯಾಮ್ ಅವರಲ್ಲಿ ಗರ್ಭಕೋಶ ಪತ್ತೆಯಾಗಿಲ್ಲ ಇದು ಮಾನವ ತಪ್ಪು. ನಿರ್ಲಕ್ಷ್ಯದಿಂದ ಉಂಟಾಗಿದೆ' ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಸಿದೆ.