ಕರ್ನಾಟಕ

karnataka

ETV Bharat / bharat

ಕಾಡಿದ ಪತಿಯ ಸಾವು, ಅನಾರೋಗ್ಯ.. ಹುಸೇನ್ ಸಾಗರ್ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ - ಅನಾರೋಗ್ಯ ಮತ್ತು ಪತಿಯ ಸಾವಿನಿಂದ ಅವರು ಖಿನ್ನತೆಗೆ ಒಳಗಾಗಿದ್ದ ಮಹಿಳೆ

ಮಹಿಳೆಯೊಬ್ಬರು ಅನಾರೋಗ್ಯ ಹಾಗೂ ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿ ಹುಸೇನ್ ಸಾಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ
ಆತ್ಮಹತ್ಯೆ

By

Published : Jul 20, 2022, 6:28 PM IST

ಹೈದರಾಬಾದ್:ನಗರದ ಹೃದಯ ಭಾಗದಲ್ಲಿರುವ ಹುಸೇನ್ ಸಾಗರ್ ಕೆರೆಗೆ 38 ವರ್ಷದ ಮಹಿಳೆಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಪೊಲೀಸರ ಪ್ರಕಾರ, ಶೈಲಜಾ (38) ಎಂಬ ಮಹಿಳೆ ಇಂದು ಬೆಳಗ್ಗೆ ಕೆರೆಗೆ ಹಾರಿದ್ದಾರೆ. ಅನಾರೋಗ್ಯ ಮತ್ತು ಪತಿಯ ಸಾವಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

ಮತ್ತೊಂದು ಘಟನೆಯಲ್ಲಿ, ಮಂಗಳವಾರ ತಡರಾತ್ರಿ ಇಲ್ಲಿನ ನರಸಿಂಗಿಯಲ್ಲಿ ವ್ಯಕ್ತಿಯೊಬ್ಬ ಫ್ಲೈಓವರ್‌ನಿಂದ ಹಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರಾಬಾದ್ ಪೊಲೀಸ್ ಕಮಿಷನರೇಟ್​ನ ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಭೀಮಪ್ಪ (30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಹೊರ ವರ್ತುಲ ರಸ್ತೆ (ORR) ಬಳಿಯ ಮೇಲ್ಸೇತುವೆಯಿಂದ ಹಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಕಲುಷಿತ ನೀರು ಕುಡಿದು ಮೃತಪಟ್ಟ ಮೂವರು: ಕಾರ್ಮಿಕರ ಶವಗಳನ್ನು ರಸ್ತೆಯ ಪಕ್ಕದ ಕಣಿವೆಗೆ ಎಸೆದ್ರು!

ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯವರಾದ ಅವರು ನರಸಿಂಗಿಯಲ್ಲಿ ನೆಲೆಸಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details